Viral News: ಮಂಜು ಬಳಿಗೆ ಹಿಂದಿರುಗಿ ಬಂದ ‘ಲೀಲಾ’ – ಮಂಜು ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್

Viral News : ಕೆಲವು ತಿಂಗಳ ಹಿಂದೆ ನಾಡಿನಾದ್ಯಂತ ಮಂಜು ಮತ್ತು ಲೀಲಾ ಎಂಬ ದಂಪತಿಗಳ ಜಗಳ ಬೀದಿ ರಂಪವಾಗಿತ್ತು. ಹೆಂಡತಿ ಲೀಲಾ ತನ್ನ ಪ್ರಿಯತಮನೊಂದಿಗೆ ಎಸ್ಕೇಪ್ ಆಗಿ ಗಂಡ ಮತ್ತು ಮಕ್ಕಳಿಗೆ ಸಾಕಷ್ಟು ರೋದನೆ ಕೊಟ್ಟಿದ್ದಳು. ಬಳಿಕ ಮಂಜು ಟಿವಿ, ಚಾನೆಲ್ಗಳಲ್ಲಿ ಬಂದು ‘ ಬಂದುಬಿಡು ಲೀಲಾ, ಮುದ್ದು, ಚಿನ್ನು, ಬಂಗಾರಿ’ ಎಂದೆಲ್ಲಾ ಗೋಗರೆದಿದ್ದರು. ತನ್ನ ಸಂಬಂಧದ ವಿಚಾರ ಇಡೀ ರಾಜ್ಯಕ್ಕೆ ಗೊತ್ತಾದರೂ ಕೂಡ ಲೀಲ ಮಾತ್ರ ತನ್ನ ನಿರ್ಧಾರವನ್ನು ಬದಲಿಸಲಿಲ್ಲ.

ನನಗೋಸ್ಕ ಇಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ನಾವು ಒಂದಾಗೋಣ. ಲೀಲಾ ಬಾರಮ್ಮಾ.., ನನ್ನ ಮಾತು ಕೇಳಿ ಬಾರೆ. ನಿನ್ನ ಎಷ್ಟು ಚೆನ್ನಾಗಿ ಸಾಕಿದ್ದೀನಿ, ಇನ್ಮೇಲೆ ಅದರ ಅಪ್ಪನಂಗೆ ನೋಡಿಕೊಳ್ತೀನಿ. ನಾನು ನಿಂಗೋಸ್ಕರ ಕುಡಿಯೋದು ಬಿಡ್ತೀನಿ, ಬೇರೆ ಹೆಣ್ಣಿನ ಸಹವಾಸ ಇದ್ದರೂ ಬಿಡ್ತೀನಿ. ನಾವಿಬ್ಬರೂ ಒಂದಾಗಿರೋಣ, ಕಾಲು ಹಿಡ್ಕೋತೀನಿ ಲೀಲಾ ಬಾ ಎಂದು ಟಿವಿಯ ಎದುರಿಗೆ ನಿಂತು ಗೋಳಾಡಿದ್ದನು. ನೀನು ಬೇಕಾದರೆ ನನ್ನ ಮಕ್ಕಳನ್ನು ಕಳಿಸಿಬಿಡು, ನಾನು ನಿನ್ನ ಜೊತೆಗೆ ಬರಲ್ಲ ಎಂದು ಹೇಳಿದ್ದಳು. ಈ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು.
ಆದರೆ ಇದೀಗ, ವೈರಲ್ ಆದ ಕೆಲವು ವಿಡಿಯೋಗಳಲ್ಲಿ ಮಂಜು ಮತ್ತು ಲೀಲಾ ಒಂದಾಗಿದ್ದಾರೆ, ಮಂಜು ಬಳಿಗೆ ಲೀಲಾ ಮರಳಿ ಬಂದಿದ್ದಾಳೆ ಎಂದು ತೋರಿಸಲಾಗುತ್ತಿದೆ. ಸ್ವತಹ ಮಂಜು ಅವರ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಅವರು ಇಬ್ಬರನ್ನು ಒಂದು ಮಾಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಸಂಧ್ಯಾ ಅವರು ಮಂಜು ಮತ್ತು ಲೀಲಾ ಅವರನ್ನು ನಿಲ್ಲಿಸಿಕೊಂಡು ಇಬ್ಬರಿಗೂ ಬುದ್ಧಿ ಮಾತು ಹೇಳುತ್ತಾ, ಈ ವಿಚಾರವನ್ನು ದೊಡ್ಡಮಟ್ಟದಲ್ಲಿ ವೈರಲ್ ಮಾಡಿದ ಮಾಧ್ಯಮದವರಿಗೂ ಕಿವಿ ಹಿಂಡಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೂ ನಿಮ್ಮ ಕುಟುಂಬ, ಸಂಸಾರವನ್ನು ನೋಡಿಕೊಂಡು ಹೋಗಿ. ‘ಎಲ್ಲರ ಮನೆ ದೋಸೆನೂ ತೂತು’ ಇರುತ್ತದೆ ಎಂದು ಬುದ್ಧಿ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಲೀಲಾಳಿಗೆ ಕೊನೆಗಾದರೂ ಬುದ್ಧಿ ಬಂದಿದ್ದಲ್ಲ ಇನ್ನಾದರೂ ಇಬ್ಬರು ಚೆನ್ನಾಗಿರಿ ಎಂದು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
https://www.instagram.com/reel/DSB4PToEzHR/?igsh=MW9yZG03NzM1MWo4aQ==
Comments are closed.