Telangana: ರಾಜ್ಯದ ಪ್ರಮುಖ ರಸ್ತೆಗಳಿಗೆ ಡೊನಾಲ್ಡ್ ಟ್ರಂಪ್, ಗೂಗಲ್ ಹೆಸರು ಇಡಲು ಸರ್ಕಾರ ನಿರ್ಧಾರ!!

Telangana : ರಾಜ್ಯದ ಪ್ರಮುಖ ರಸ್ತೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಗೂಗಲ್ ಹೆಸರು ಇಡಲು ಸರ್ಕಾರವು ನಿರ್ಧರಿಸಿದೆ. ಹಾಗಂತ ಇದು ನಮ್ಮ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರವಲ್ಲ. ಬದಲಿಗೆ ನಮ್ಮ ನೆರೆಯ ರಾಜ್ಯವಾದ ತೆಲಂಗಾಣದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ.

ಹೌದು, ತೆಲಂಗಾಣದ ಪ್ರಸ್ತಾವಿತ ಆರ್‌ಆರ್‌ಆರ್‌ನಲ್ಲಿ ಮುಂಬರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ದಿವಂಗತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಗೌರವಾರ್ಥವಾಗಿ ಹೆಸರಿಸಲು ಸರ್ಕಾರ ನಿರ್ಧರಿಸಿದೆ. ಮತ್ತೊಂದು ಪ್ರಸ್ತಾವನೆಯಲ್ಲಿ, ಹೈದರಾಬಾದ್‌ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ ಉದ್ದಕ್ಕೂ ಇರುವ ಹೈ ಪ್ರೊಫೈಲ್ ರಸ್ತೆಗೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲ ಸಮಯದ ಹಿಂದೆ ಸಮಾವೇಶ ಒಂದರಲ್ಲಿ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಹೈದರಾಬಾದ್‌ನ ಪ್ರಮುಖ ರಸ್ತೆಗಳಿಗೆ ಪ್ರಮುಖ ಜಾಗತಿಕ ಕಂಪನಿಗಳ ಹೆಸರಿಡಲು ಪ್ರಸ್ತಾಪಿಸಿದ್ದರು. ಹೆಚ್ಚುವರಿಯಾಗಿ, ಗೂಗಲ್ ಮತ್ತು ಗೂಗಲ್ ನಕ್ಷೆಗಳ ಜಾಗತಿಕ ಪ್ರಭಾವ ಮತ್ತು ಕೊಡುಗೆಯನ್ನು ಗುರುತಿಸಲು ಒಂದು ಪ್ರಮುಖ ವಿಭಾಗವನ್ನು ‘ಗೂಗಲ್ ಸ್ಟ್ರೀಟ್’ ಎಂದು ಹೆಸರಿಸಲಾಗುವುದು ಎಂದು ತಿಳಿಸಿದ್ದರು. ಈ ಪ್ರಸ್ತಾವನೆಗಳು ತೆಲಂಗಾಣ ಸರ್ಕಾರ ರಾಜ್ಯವನ್ನು ನಾವೀನ್ಯತೆ ಆಧಾರಿತ ಅಭಿವೃದ್ಧಿಯ ಕೇಂದ್ರವಾಗಿ ಇರಿಸುವ ಉಪಕ್ರಮದ ಭಾಗವಾಗಿದೆ.
Comments are closed.