Mark : ರಿಲೀಸ್ ಆದ 10 ಗಂಟೆಯೊಳಗೆ ದರ್ಶನ್ ‘ಡೆವಿಲ್’ ದಾಖಲೆ ಮುರಿದ ಸುದೀಪ್ ‘ಮಾರ್ಕ್ಸ್’

Share the Article

Mark: ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಬೆಳಗ್ಗೆ 10.05ಕ್ಕೆ ಡೆವಿಲ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಬೆನ್ನಲ್ಲೇ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ರಿಲೀಸ್ ಆದ 10 ಗಂಟೆಯೊಳಗೆ ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ಟ್ರೈಲರ್ ದಾಖಲೆಯನ್ನು ಮುರಿದಿದೆ.

ಹೌದು, ನಟ ಕಿಚ್ಚ ಸುದೀಪ್‌ (Kiccha Sudeep) ಅವರ ಬಹು ನಿರೀಕ್ಷಿತ ಸಿನಿಮಾ ʼಮಾರ್ಕ್‌ʼನ (Mark) ಟ್ರೈಲರ್‌ (Trailer) ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ನಟ ದರ್ಶನ್ ಅಭಿಯಾನದ ಡೆವಿಲ್ ಚಿತ್ರದ ದಾಖಲೆ ಪುಡಿ ಮಾಡಿದೆ. ‘ಡೆವಿಲ್’ ಟ್ರೇಲರ್ ರಿಲೀಸ್ ಆದಾಗಿನಿಂದ ಇದುವರೆಗೂ 1.4 ಕೋಟಿ ವೀಕ್ಷಣೆಯನ್ನು ಪಡೆದುಕೊಂಡಿದೆ. ಆದರೆ ಮಾರ್ಕ್ ರಿಲೀಸ್ ಆದಾಗಿನಿಂದ ಇದುವರೆಗೂ 1.4 ಕೋಟಿ ವೀವ್ಸ್ ಪಡೆದುಕೊಂಡು ಡೆವಿಲ್ ದಾಖಲೆಯನ್ನು ಪುಡಿಗಟ್ಟಿದೆ.

ಇನ್ನೂ ಮಾಕ್ಸ್ ಬಳಿಕ ಕಿಚ್ಚ ಅವರ 47ನೇ ಸಿನಿಮಾ ʼಮಾರ್ಕ್‌ʼನಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸರಿಗಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಟ್ರೈಲರ್‌ ಬಿಡುಗಡೆಯಾಗಿದೆ. ಟ್ರೈಲರ್‌ಬಲ್ಲಿ ಇದೊಂದು ಆಕ್ಷನ್‌ ಸಿನಿಮಾ ಎನ್ನೋದು ಪಕ್ಕಾ ಆಗಿದೆ.

Comments are closed.