Indigo: ವಿಮಾನ ಹಾರಾಟದಲ್ಲಿ ತೊಂದರೆ -ಪ್ರಯಾಣಿಕರಿಗೆ 610 ಕೋಟಿ ರೂ ರೀಫಂಡ್ ಮಾಡಿದ ಇಂಡಿಗೋ !!

Share the Article

Indigo : ಇಂಡಿಗೋ ವಿಮಾನಗಳ ಹಾರಾಟ ದಿಢೀರ್‌ ರದ್ದಾದ ಹಿನ್ನೆಲೆ ಕೆಲ ದಿನಗಳಿಂದ ಪ್ರಯಾಣಿಕರ ಆಕ್ರೋಶಕ್ಕೆ ಸಂಸ್ಥೆ ಗುರಿಯಾಗಿತ್ತು. ಈ ಬೆನ್ನಲ್ಲೇ ಇದೀಗ ಇಂಡಿಗೋ ಸಂಸ್ಥೆಯು ಪ್ರಯಾಣಿಕರಿಗೆ ಹಣವನ್ನು ರೀಫಂಡ್ ಮಾಡಿದೆ.

ಹೌದು, ಟಿಕೆಟ್‌ ಬುಕಿಂಗ್‌ ಮಾಡಿಯೂ ವಿಮಾನ ಪ್ರಯಾಣದಿಂದ ವಂಚಿತರಾದ ಪ್ರಯಾಣಿಕರಿಗೆ ರಿಲೀಫ್‌ ನೀಡಿದೆ. ಅಡಚಣೆಗೆ ಕ್ಷಮೆ ಕೋರಿರುವ ಇಂಡಿಗೋ, ಬರೋಬ್ಬರಿ 610 ಕೋಟಿ ರೂಪಾಯಿಯಷ್ಟು ಟಿಕೆಟ್‌ ಹಣವನ್ನು ಪ್ರಯಾಣಿಕರಿಗೆ ವಾಪಸ್‌ ನೀಡುವುದಾಗಿ ಘೋಷಿಸಿದೆ.

ಶನಿವಾರ ಸರಕಾರ ಇಂಡಿಗೋ ಸಂಸ್ಥೆಗೆ ಸೂಚನೆ ನೀಡಿ ಎಲ್ಲ ಪ್ರಯಾಣಿಕರಿಗೆ ಡಿಸೆಂಬರ್‌ 7ರ ರಾತ್ರಿ 8 ಗಂಟೆಯೊಳಗೆ ಹಣ ಮರುಪಾವತಿ ಮಾಡಬೇಕೆಂದು ಹೇಳಿತ್ತು. ಸದ್ಯ ಮರುಪಾವತಿ ಕಾರ್ಯ ವೇಗದಿಂದ ಸಾಗುತ್ತಿದ್ದು ಈಗಾಗಲೇ 610 ಕೋಟಿ ರೂ. ಮರಳಿಸಲಾಗಿದೆ.

‘ʼಇಂಡಿಗೋ ವಿಮಾನ ಹಾರಾಟದಲ್ಲಿ ಸುಧಾರಣೆ ಕಂಡು ಬಂದಿದೆ. ಡಿಸೆಂಬರ್‌ 5ರಂದು 706 ವಿಮಾನ ಹಾರಾಟ ನಡೆಸಿದ್ದರೆ, ಡಿಸೆಂಬರ್‌ 7ರಂದು ಈ ಸಂಖ್ಯೆ ಈಗ 1,565ಕ್ಕೆ ತಲುಪಿದೆ. ದಿನಾಂತ್ಯಕ್ಕೆ 1,650ಕ್ಕೆ ಹೆಚ್ಚಾಗಲಿದೆʼ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. 138 ಸ್ಥಳಗಳ ಪೈಕಿ 137 ಸ್ಥಳಗಳ ಸಂಚಾರ ಆರಂಭವಾಗಿದೆ. ಆ ಮೂಲಕ ಸಂಚಾರ ಶನಿವಾರಕ್ಕಿಂತ ಶೇ. 30ರಷ್ಟು ಹೆಚ್ಚಳ ಕಂಡಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಇನ್ನೂ ಇಂಡಿಗೋದ ಕಾರ್ಯಾಚರಣೆಯ ಬಿಕ್ಕಟ್ಟಿನಿಂದ ಉಂಟಾದ ಅಡಚಣೆಯನ್ನು ಪರಿಹರಿಸಲು ಮತ್ತು ಪ್ರಯಾಣಿಕರು ನಿರಂತರ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ (MoCA) ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

Comments are closed.