ಪ್ರೀ ವೆಡ್ಡಿಂಗ್‌ ಶೂಟ್‌ಗೆ ಹೋದ ಜೋಡಿ ಭೀಕರ ಅಪಘಾತ, ಸಾವು

Share the Article

ಕೊಪ್ಪಳ: ಮದುವೆಗೆ ಇನ್ನೇನು ಎರಡು ವಾರ ಮಾತ್ರ ಬಾಕಿ ಇತ್ತು. ಮದುವೆ ಸಿದ್ಧತೆ ಭರದಿಂದ ಸಾಗಿತ್ತು. ಭಾನುವಾರ ಖುಷಿ ಖುಷಿಯಾಗಿಯೇ ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ಮಾಡಿಕೊಂಡಿದ್ದಾರೆ. ಹೀಗೆ ಶೂಟ್‌ ಮಾಡಿ ಮುಗಿಸಿ ಮನೆಗೆ ವಾಪಸ್‌ ಬರುವ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಕೊಪ್ಪಳ ತಾಲೂಕಿನ ಗಂಗಾವತಿ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕರಿಯಪ್ಪ ಮಡಿವಾಳ (26) ಬಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತ ಹೊಂದಿದ್ದಾರೆ.

ಡಿ.21 ರಂದು ಇವರಿಬ್ಬರ ಮದುವೆ ನಿಗದಿಯಾಗಿತ್ತು. ಭಾನುವಾರ ಪ್ರೀ ವೆಡ್ಡಿಂಗ್‌ ಶೂಟ್‌ಗೆ ಬಂದಿದ್ದರು. ಗಂಗಾವತಿ ತಾಲೂಕಿನ ಬೆಣಕಲ್‌ ಬಳಿ ಗುಡ್ಡ ಪ್ರದೇಶದಲ್ಲಿ ಶೂಟಿಂಗ್‌ ಮುಗಿಸಿಕೊಂಡು ಮನೆಗೆ ವಾಪಸು ಆಗುತ್ತಿದ್ದರು. ಬೆಣಕಲ್‌ ಬಳಿಯೇ ಇವರ ಬೈಕ್‌ ಲಾರಿಗೆ ಡಿಕ್ಕಿಯಾಗಿದೆ. ಗಂಗಾವತಿ ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Comments are closed.