Recharge : ಹೊಸ ವರ್ಷಕ್ಕೆ ದೇಶದ ಜನತೆಗೆ ಶಾಕ್ – ರೀಚಾರ್ಜ್ ಬೆಲೆ ಭಾರೀ ಹೆಚ್ಚಳ

Recharge : ನೀನು ಕೆಲವೇ ದಿನಗಳಲ್ಲಿ 2025 ಮುಗಿದು 2026 ರನ್ನು ಜನರು ಸ್ವಾಗತಿಸಲಿದ್ದಾರೆ. ಆದರೆ ಈ ಹೊಸ ವರ್ಷಕ್ಕೆ ಟೆಲಿಕಾಂ ಕಂಪನಿಗಳು ದೇಶದ ಜನತೆಗೆ ದೊಡ್ಡ ಶಾಕ್ ನೀಡಲಿವೆ. ಕೆಲವು ತಿಂಗಳ ಹಿಂದಷ್ಟೇ ರಿಚಾರ್ಜ್ ದರವನ್ನು ಏರಿಸಿ, ಎಲ್ಲಾ ಟೆಲಿಕಾಂ ಕಂಪನಿಗಳು ದೇಶದ ಜನತೆಗೆ ಶಾಕ್ ನೀಡಿದ್ವು. ಇದೀಗ ಈ ಬೆನ್ನಲ್ಲೇ ಮತ್ತೆ ಒಗ್ಗೂಡಿರುವ ಟೆಲಿಕಾಂ ಕಂಪನಿಗಳು ಮತ್ತೆ ತನ್ನ ಗ್ರಾಹಕರಿಗೆ ಅಘಾತ ನೀಡಲು ತಯಾರಿ ನಡೆಸಿವೆ. ಅಂದರೆ ಡಿಸೆಂಬರ್ 1 ರಿಂದ ಇಲ್ಲ ರಿಚಾರ್ಜ್ ದರಗಳು ಏರಿಕೆಯಾಗಲಿವೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಹೌದು, ಇದೇ ಡಿಸೆಂಬರ್ 1ರಿಂದ ಈ ಎಲ್ಲಾ ಟೆಲಿಕಾಂ ಕಂಪೆನಿಗಳು ಮತ್ತೊಮ್ಮೆ ದರ ಏರಿಕೆ ಮಾಡಲು ಚಿಂತನೆ ನಡೆಸಿವೆ ಎನ್ನಲಾಗುತ್ತಿದೆ. ಡಿಸೆಂಬರ್ ಅಂತ್ಯ ಅಥವಾ ಹೊಸ ವರ್ಷದ ಆರಂಭದ ವೇಳೆಗೆ ಜಿಯೋ (Reliance JIO), ಏರ್‌ಟೆಲ್ ಮತ್ತು ವಿಐ ತಮ್ಮ ಯೋಜನೆಗಳ ಬೆಲೆಗಳನ್ನು 10-12% ರಷ್ಟು ಹೆಚ್ಚಿಸಬಹುದು ಎಂದು ವರದಿಯಾಗಿದೆ.
ಎಷ್ಟು ಹೆಚ್ಚಾಗಬಹುದು?
ರೂ 239 ಯೋಜನೆಯು ಸುಮಾರು ರೂ 265-ರೂ 270 ವರೆಗೆ ಹೋಗಬಹುದು. · ರೂ 479 ಯೋಜನೆಯು ರೂ 530 ಕ್ಕೆ ತಲುಪಬಹುದು. ವಾರ್ಷಿಕ ಯೋಜನೆಗಳು ಆಪರೇಟರ್ ಅನ್ನು ಅವಲಂಬಿಸಿ ರೂ 300-ರೂ 500 ರಷ್ಟು ಹೆಚ್ಚಾಗಬಹುದು.
ಇನ್ನೂ ಆದಾಗ್ಯೂ, ಕಂಪನಿಗಳು ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಏತನ್ಮಧ್ಯೆ, ಪಾವತಿ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಕಳುಹಿಸಲಾಗುತ್ತಿರುವ ಎಚ್ಚರಿಕೆಗಳು ಕಳವಳಗಳನ್ನು ಮತ್ತಷ್ಟು ಹೆಚ್ಚಿಸಿವೆ.
Comments are closed.