Indian Railway : ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ – ಟಿಕೆಟ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ

Share the Article

Indian Railway : ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯು ಸಿಹಿ ಸುದ್ದಿ ಕೊಟ್ಟಿದ್ದು, ಇನ್ಮುಂದೆ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು 45 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದ ಮಹಿಳಾ ಪ್ರಯಾಣಿಕರಿಗೆ, ಆಯ್ಕೆ ಮಾಡದಿದ್ದರೂ ಸಹ, ಲಭ್ಯತೆಗೆ ಅನುಗುಣವಾಗಿ ಲೋವರ್ ಬರ್ತ್‌ ಸೀಟುಗಳನ್ನು ಸ್ವಯಂಚಾಲಿತವಾಗಿ ಹಂಚಿಕೆ ಮಾಡಲಾಗುತ್ತದೆ ತಿಳಿಸಿದೆ.

ಹೌದು, ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಮಹತ್ವದ ಸುದ್ದಿಯನ್ನು ಪ್ರಕಟಿಸಿದೆ. ಹಿರಿಯ ನಾಗರಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಈಗ ಸ್ವಯಂಚಾಲಿತವಾಗಿ ಲೋವರ್ ಬರ್ತ್ಗಳನ್ನು ನೀಡಲಾಗುತ್ತದೆ ಎಂದು ರೈಲ್ವೆ ಘೋಷಿಸಿದೆ. ಬುಕಿಂಗ್ ಮಾಡುವಾಗ ನೀವು ಈ ಆಯ್ಕೆಯನ್ನು ಆರಿಸದಿದ್ದರೂ ಸಹ, ಲಭ್ಯತೆಯ ಆಧಾರದ ಮೇಲೆ ರೈಲ್ವೆ ಸ್ವಯಂಚಾಲಿತವಾಗಿ ಅವುಗಳನ್ನು ಹಂಚಿಕೆ ಮಾಡುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

ಅಲ್ಲದೆ ಹಿರಿಯ ನಾಗರಿಕರು ಮತ್ತು ಅಂಗವಿಕಲ ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಸ್ಲೀಪರ್ ಕ್ಲಾಸ್ನಲ್ಲಿ ಪ್ರತಿ ಕೋಚ್ಗೆ ಆರರಿಂದ ಏಳು ಲೋವರ್ ಬರ್ತ್ಗಳು, 3AC ನಲ್ಲಿ ನಾಲ್ಕರಿಂದ ಐದು ಮತ್ತು 2AC ನಲ್ಲಿ ಮೂರರಿಂದ ನಾಲ್ಕು ಹಿರಿಯ ನಾಗರಿಕರು, 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ.

Comments are closed.