COVID 19: ಕೋವಿಡ್ ಎಫೆಕ್ಟ್- ಚಿಕ್ಕ ವಯಸಿನಲ್ಲೇ ಋತುಮತಿಯಾಗುತ್ತಿರುವ ಬಾಲಕಿಯರು!

COVID 19: ಕೋವಿಡ್ ಮಹಾಮಾರಿ (Covid 19).. ಅದೆಷ್ಟೋ ಜೀವಗಳನ್ನು ಬಲಿ ಪಡೆದಿದ್ದು ಮಾತ್ರವಲ್ಲದೇ ಇಂದಿಗೂ ಜನರ ಆರೋಗ್ಯದ (Human health) ಮೇಲೆ ಹಲವು ರೀತಿಯ ಮಾರಕ ಪರಿಣಾಮಗಳನ್ನು ಬೀರುತ್ತಿದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ.

ಇದೀಗ ಡಾ. ವೈಶಾಖಿ ಎಂಬುವವರು ಈ ಬಗ್ಗೆ ಸುಧೀರ್ಘವಾದ ಅಧ್ಯಯನ ನಡೆಸಿದ್ದು ಈ ವರದಿಯಲ್ಲಿ ಸಾಕಷ್ಟು ಆತಂಕಕಾರಿ ಅಂಶಗಳು ಹೊರಬಿದ್ದಿವೆ. ಕೋವಿಡ್ ಸಾಂಕ್ರಾಮಿಕದ ನಂತರ ನಮ್ಮ ಆರೋಗ್ಯ ಮತ್ತು ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿದೆ. ಇದರ ಪರಿಣಾಮವಾಗಿ ಯುವತಿಯರಲ್ಲಿ ಅವಧಿಪೂರ್ವ ಋತುಸ್ರಾವ, ಅತಿ ಕಿರಿಯ ವಯಸ್ಸಿಗೆ ಪ್ರೌಢಾವಸ್ಥೆಗೆ ಬರುವುದು ಕಂಡುಬರುತ್ತಿದೆ ಎಂದು ಈ ಅಧ್ಯಯನ ಹೇಳಿದೆ. ಕೇವಲ ಕೋವಿಡ್ ಮಾತ್ರವಲ್ಲದೇ, ಕಳಪೆ ಜೀವನ ಶೈಲಿಯಿಂದ ಕೂಡ ಈ ಸಮಸ್ಯೆಗಳು ಉಂಟಾಗುತ್ತಿದೆ.ನಿದ್ರಾಹೀನತೆ, ಕೆಟ್ಟ ಆಹಾರ ಪದ್ಧತಿ ಕೂಡ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಹೀಗಾಗಿ ಆರಂಭಿಕ ಹಂತದಲ್ಲಿ ಆಯೋಗ್ಯದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಿ ಸೂಕ್ತ ರೀತಿಯಲ್ಲಿ ವೈದ್ಯಕೀಯ ನೆರವು ಪಡೆಯುವುದು ಮತ್ತು ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳುವುದರಿಂದ ಈ ರೀತಿಯ ಅಡ್ಡ ಪರಿಣಾಮಗಳನ್ನು ತಡೆಯಬಹುದು ಎಂದು ಸಲಹೆ ನೀಡಿದ್ದಾರೆ.
Comments are closed.