1 ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ: ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ

ಬೆಂಗಳೂರು: 1 ನೇ ತರಗತಿಗೆ ದಾಖಲಾತಿ ಮಾಡಲು ಮಗುವಿಗೆ ಕನಿಷ್ಠ 6 ವರ್ಷ ತುಂಬಿರಬೇಕು. ದಾಖಲಾತಿ ಸಮಯದಲ್ಲಿ 6 ವರ್ಷ ತುಂಬಿದ್ದರೆ ಮಾತ್ರ 1 ನೇ ತರಗತಿಗೆ ದಾಖಲಾತಿ ಮಾಡಲು ಸಾಧ್ಯ ಎನ್ನುವ ನಿಯಮವನ್ನು ಕಡ್ಡಾಯ ಮಾಡಲು ಸರಕಾರ ಮುಂದಾಗಿದೆ. ಆದರೆ ಈ ನಿರ್ಧಾರ ಇಂಗ್ಲೀಷ್ ಶಾಲಾ ಮಕ್ಕಳ ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಹಾಗಾಗಿ ಈ ನಿಯಮದಲ್ಲಿ ಸಡಿಲಿಕೆ ಮಾಡಬೇಕು ಎಂದು ಪೋಷಕರು ಮನವಿಯನ್ನು ಮಾಡಿದ್ದಾರೆ ಎಂದು ವರದಿಯಾಗಿದೆ.

ಡಿಕೆ ಶಿವಕುಮಾರ್ ಅವರನ್ನು ಇಂಗ್ಲೀಷ್ ಶಾಲಾ ಮಕ್ಕಳ ಪೋಷಕರು ಭೇಟಿಯಾಗಿದ್ದು, ಕನಿಷ್ಠ ವಯಸ್ಸು ನಿಯಮದಲ್ಲಿ ಸಡಿಲಿಕೆ ಮಾಡಲು ಮನವಿ ಮಾಡಿದ್ದಾರೆ. ಈ ನಿಯಮದಿಂದ ಹಲವು ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಲಿದೆ. ಈಗಾಗಲೇ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶ ಸಾಧ್ಯವಿರುವುದಿಲ್ಲ. ಒಂದು ವರ್ಷ ವ್ಯರ್ಥವಾಗಲಿದೆ ಎಂದು ಮನವಿ ಮಾಡಿದ್ದಾರೆ.
Comments are closed.