RCB: ಈವರೆಗೂ RCB ಖರೀದಿಸಿದ 5 ದುಬಾರಿ ಪ್ಲೇಯರ್ಸ್ ಗಳು ಯಾರು?

RCB: 2025ರ ಐಪಿಎಲ್ ನಲ್ಲಿ ಆರ್‌ಸಿಬಿಯು ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತು. ಇನ್ನು 2026ರ ಐಪಿಎಲ್ ಗೆ ಇದೇ ಡಿಸೆಂಬರ್ ನಲ್ಲಿ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಈವರೆಗೂ ಆರ್‌ಸಿಬಿ ಖರೀದಿಸಿದ ಐದು ದುಬಾರಿ ಪ್ಲೇಯರ್ಸ್ ಗಳು ಯಾರು ಎಂಬುವ ವಿಚಾರ ಮುನ್ನಡೆಗೆ ಬಂದಿದೆ.

ಯುವರಾಜ್ ಸಿಂಗ್: IPL ಇತಿಹಾಸದಲ್ಲಿ RCB ಅತಿ ಹೆಚ್ಚು ಹಣ ಕೊಟ್ಟಿದ್ದು ಎಂದರೆ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್‌ಗೆ. 2014ರ ಐಪಿಎಲ್ ಸೀಸನ್‌ನಲ್ಲಿ ಯುವರಾಜ್ ಸಿಂಗ್‌ಗೆ ಆರ್‌ಸಿಬಿಯು 14 ಕೋಟಿ ರೂಪಾಯಿಗಳನ್ನು ನೀಡಿತ್ತು. ಇದು ಎಲ್ಲ ಈ ಹಿಂದೆ ಕ್ರಿಕೆಟರ್ಸ್‌ಗಳಿಗೆ ನೀಡಿದ್ದ ಹಣವಾಗಿದೆ. ಸದ್ಯ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡದಲ್ಲಿ 21 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ.
ಹ್ಯಾಜಲ್‌ವುಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೆಚ್ಚು ಹಣ ಕೊಟ್ಟಿದ್ದು ಎಂದರೆ ಅದು ಆಸ್ಟ್ರೇಲಿಯಾದ ಪೇಸ್ ಬೌಲರ್ ಹ್ಯಾಜಲ್‌ವುಡ್‌ಗೆ. ಇಡೀ ಆರ್‌ಸಿಬಿ ಇತಿಹಾಸದಲ್ಲೇ ಜೋಶ್ ಹ್ಯಾಜಲ್‌ವುಡ್ ಅತ್ಯಧಿಕ ದುಡ್ಡು ಪಡೆದ ಎರಡನೇ ಪ್ಲೇಯರ್ ಆಗಿದ್ದಾರೆ. 2025ರ ಮೆಗಾ ಆಕ್ಷನ್‌ನಲ್ಲಿ 12.50 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿತ್ತು.
ಅಲ್ಜಾರಿ ಜೋಸೆಫ್: ಅಧಿಕ ಹಣ ಕೊಟ್ಟ ಮೂರನೇ ಆಟಗಾರ ಎಂದರೆ ವೆಸ್ಟ್ ಇಂಡೀಸ್‌ನ ಅಲ್ಜಾರಿ ಜೋಸೆಫ್ ಆಗಿದ್ದಾರೆ. 2024ರ ಸೀಸನ್‌ನಲ್ಲಿ 11.50 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಆರ್‌ಸಿಬಿ ಫ್ರಾಂಚೈಸಿ ತಂಡದಿಂದ ತೆಗೆದ ಮೇಲೆ 2025ರಲ್ಲಿ ಅಲ್ಜಾರಿ ಜೋಸೆಫ್‌ರನ್ನು ಯಾವುದೇ ತಂಡ ಕೊಂಡುಕೊಳ್ಳಲಿಲ್ಲ.
ವನಿಂದು ಹಸರಂಗ್: ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ್ ಅವರನ್ನು ಈ ಹಿಂದೆ ಆರ್‌ಸಿಬಿ ಕೊಂಡುಕೊಂಡಿತ್ತು. ಈ ಬಿಗ್ ಆಲ್‌ರೌಂಡರ್‌ಗೆ ಫ್ರಾಂಚೈಸಿ 2022ರಲ್ಲಿ ಬರೋಬ್ಬರಿ 10.75 ಕೋಟಿ ರೂಪಾಯಿಗಳನ್ನು ನೀಡಿತ್ತು.
ದಿನೇಶ್ ಕಾರ್ತಿಕ್ : ಆರ್‌ಸಿಬಿ ತಂಡದ ಮಾಜಿ ಆಟಗಾರ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ಆರ್‌ಸಿಬಿ ಫ್ರಾಂಚೈಸಿಯು ಈ ಹಿಂದೆ 10.50 ಕೋಟಿ ರೂಪಾಯಿಗಳನ್ನು ನೀಡಿತ್ತು. 2015ರ ಸೀಸನ್‌ನಲ್ಲಿ ದಿನೇಶ್ ಕಾರ್ತಿಕ್‌ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.
Comments are closed.