Vladimir Putin: ಪುಟಿನ್ ಭೇಟಿ ಹಿನ್ನೆಲೆ ಭಾರೀ ಭದ್ರತೆ – ಭಾರತದಿಂದಲೂ ಮಲ, ಮೂತ್ರ ರಷ್ಯಕ್ಕೆ ವಾಪಸ್!!

Share the Article

(Vladimir Putin: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಇದೀಗ ಭಾರತ (India) ಪ್ರವಾಸದಲ್ಲಿದ್ದು, ಇಡೀ ಜಗತ್ತೇ ಪುಟ್ಟಿನ ಮತ್ತು ಮೋದಿ ಅವರ ಸ್ನೇಹ ಸಂಬಂಧದ ಮೇಲೆ ಕಣ್ಣಿಟ್ಟಿದೆ ಇದೇ ಸಂದರ್ಭ ಪುಟಿನ್‌ಗೆ ಒದಗಿಸಲಾಗುತ್ತಿರುವ ಭದ್ರತಾ ಕ್ರಮಗಳು ಹೆಚ್ಚಿನ ಗಮನಸೆಳೆಯುತ್ತಿದೆ. ಕಾರಣ ಭಾರತದಿಂದಲೂ ಪುಟ್ಟಿನ ಅವರ ಮಲಮೂತ್ರವನ್ನು ರಷ್ಯಾಕ್ಕೆ ವಾಪಸ್ ತೆಗೆದುಕೊಂಡು ಹೋಗಲಾಗುತ್ತಿದೆ.

2 ದಿನಗಳ ಭಾರತ ಪ್ರವಾಸದಲ್ಲಿರುವ ಪುಟಿನ್‌ ಮಾಸ್ಕೋದಿಂದ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ಪುಟಿನ್‌ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು. ಬಳಿಕ ಅವರು ಒಂದೇ ಕಾರಿನಲ್ಲಿ ಮೋದಿ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಇನ್ನೂ ಪುಟಿನ್ ಅವರಿಗೆ ನೀಡಿದ ಭದ್ರತೆಯಲ್ಲಿ ಒಂದು ನಿಯಮ ಅತ್ಯಂತ ವಿಚಿತ್ರವಾಗಿ ಕಾಣಿಸಿಕೊಂಡಿದೆ. ಪುಟಿನ್ ಅವರು ಭಾರತದಲ್ಲಿ ತಂಗಿರುವ ಸಮಯದಲ್ಲಿ ಮಾಡಿದ ಮಲ ಹಾಗೂ ಮೂತ್ರವನ್ನು ವಿಶೇಷ ಸೂಟ್‌ಕೇಸ್‌ನಲ್ಲಿ ಸಂಗ್ರಹಿಸಿ ರಷ್ಯಾಕ್ಕೆ ವಾಪಸ್ ಕಳುಹಿಸಲಾಗುತ್ತದೆ.

ಇದಕ್ಕೆ ಕಾರಣವೂ ಇದೆ. ಮಲ, ಮೂತ್ರ ಸಂಗ್ರಹಿಸಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆಯಬಹುದು ಎಂಬುದು ರಷ್ಯಾ ಆತಂಕ. ಇದಕ್ಕಾಗಿ ಮಲ,ಮೂತ್ರ ಸಂಗ್ರಹಿಸಲು ಪೂಪ್ ಸೂಟ್ ಕೇಸ್ ಗಳನ್ನೂ ಭಾರತಕ್ಕೆ ತರಲಾಗಿದೆ. ಜೊತೆಗೆ ಅವರಿಗೆ ನೀಡಲಾಗುವ ಆಹಾರವನ್ನೂ ಲ್ಯಾಬ್ ನಲ್ಲಿ ಪರೀಕ್ಷಿಸಿ ಬಳಿಕ ನೀಡಲಾಗುತ್ತದೆ.

ಪುಟಿನ್‌ ಇಂತಹ ಕಟ್ಟುನಿಟ್ಟಿನ ಭದ್ರತಾ ಪ್ರೋಟೊಕಾಲ್‌ಗಳನ್ನು 2000 ಇಸವಿಯಲ್ಲೇ ಅನುಸರಿಸಲು ಪ್ರಾರಂಭಿಸಿದ್ದರು. ಅವರು ಎಲ್ಲೇ ಪ್ರಯಾಣಿಸಿದರೂ ಅಲ್ಲಿನ ಪಾತ್ರೆ, ಸ್ಥಳೀಯ ನೀರಿನ ಸೇವನೆ ತಪ್ಪಿಸುತ್ತಾರೆ. ಅವರ ವೈಯಕ್ತಿಕ ಭದ್ರತಾ ತಂಡ ಪುಟಿನ್ ಪ್ರಯಾಣಿಸಿದಲ್ಲೆಲ್ಲಾ ರಷ್ಯಾದಿಂದ ಬಾಟಲಿ ನೀರು, ನೈರ್ಮಲ್ಯ ಕಿಟ್‌ಗಳು ಮತ್ತು ವೈದ್ಯಕೀಯ ತಜ್ಞರನ್ನು ಸಾಗಿಸುತ್ತದೆ.

Comments are closed.