ಬಾಬ್ರಿ ಮಸೀದಿ ಮತ್ತೆ ಕಟ್ಟುವೆ ಎಂದ ಟಿಎಂಸಿ ಶಾಸಕ ಕಬೀರ್ ಅಮಾನತು

ಕೋಲ್ಕತಾ: ಬಾಬ್ರಿ ಮಸೀದಿ ಮಾದರಿಯಲ್ಲಿ ಪ.ಬಂಗಾಲದ ಮುರ್ಷಿದಾಬಾದ್‌ನಲ್ಲಿ ಮಸೀದಿ ನಿರ್ಮಿಸುವೆ ಎಂದು ಘೋಷಿಸಿ ವಿವಾದ ಸೃಷ್ಟಿಸಿದ್ದ ಭರತ್ಪುರ ಶಾಸಕ ಹುಮಾಯೂನ್ ಕಬೀರ್ ರನ್ನು ಗುರುವಾರ ಟಿಎಂಸಿ ಪಕ್ಷವು ಅಮಾನತುಗೊಳಿಸಿದೆ. ರಾಜ್ಯದಲ್ಲಿ ಪಕ್ಷವು ಸಾಮರಸ್ಯ ಕಾಪಾಡಲು ಪಕ್ಷ ಶ್ರಮಿಸುತ್ತಿರುವಂತೆಯೇ ಶಾಸಕ ಕಬೀರ್ ಅಶಿಸ್ತಿನಿಂದ ವರ್ತಿಸಿದ್ದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಪಕ್ಷ ತಿಳಿಸಿದೆ.

ಕಬೀರ್ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ ದಿನವಾದ ಡಿ.6ರಂದು ಪ್ರಸ್ತಾವಿತ ಮಸೀದಿಗೆ ಶಂಕು ಸ್ಥಾಪನೆ ನೆರವೇರಿಸುವುದಾಗಿ ಕಬೀರ್ ಘೋಷಿಸಿದ್ದರು. ತನ್ನ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಿದ ಕಬೀರ್, ‘ರ್ಯಾಲಿಗೆ ಆಹ್ವಾನಿಸಿದ ಅನಂತರ ಅಮಾನತು ಮಾಡಿದ್ದು ಉದ್ದೇಶಪೂರ್ವಕವಾಗಿ ಮಾಡಿದ ಅವಮಾನ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಡಿ.22ರಂದು ಹೊಸ ಪಕ್ಷ ಸ್ಥಾಪಿಸುತ್ತೇನೆ’ ಎಂದು ಅವರು ಘೋಷಿಸಿದ್ದಾರೆ.
Comments are closed.