Murugha Shri: ಅತ್ಯಾಚಾರ ನಡೆದ ದಿನ ಶ್ರೀಗಳು ದೇಶದಲ್ಲಿ ಇರಲೇ ಇಲ್ಲ – 2ನೇ ಪೋಕ್ಸೋ ಪ್ರಕರಣದಲ್ಲೂ ಮುರುಘಾ ಶ್ರೀ ಖುಲಾಸೆ!!

Share the Article

Muruga Shri: ರಾಜ್ಯಾದ್ಯಂತ ಸದ್ದು ಮಾಡಿದ್ದ ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಕೇಳಿ ಬಂದಿದ್ದ ಪೋಕ್ಸೋ ಪ್ರಕರಣ ಇದೀಗ ಸುಖಾಂತ್ಯ ಕಂಡಿದ್ದು ಮುರುಘಾ ಶ್ರೀಗಳನ್ನು ಈ ಅತ್ಯಾಚಾರ ಪ್ರಕರಣದಿಂದ ಚಿತ್ರದುರ್ಗದ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಬೆನ್ನಲ್ಲೇ ಎರಡನೇ ಪೋಕ್ಷೋ ಪ್ರಕರಣದಲ್ಲಿಯೂ ಮುರುಘಾ ಶ್ರೀಗಳು ನಿರಪರಾಧಿ ಎಂದು, ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದೆ.

ಹೌದು, ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀ ಗಳನ್ನು ಅವರ ವಿರುದ್ಧದ 2 ನೇ ಪೋಕ್ಸೋ ಪ್ರಕರಣದಿಂದಲೂ ನ್ಯಾಯಾಲಯ ಖುಲಾಸೆಗೊಳಿಸಿದೆ. ಎರಡು ದಿನದ ಹಿಂದೆ ಮೊದಲ ಕೇಸ್‌ ನಲ್ಲಿ ಖುಲಾಸೆಗೊಳಿಸಲಾಗಿತ್ತು. 2022ರ ಜುಲೈ 24 ರಂದು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಆದರೆ, ಆ ದಿನಾಂಕದಂದು ಶರಣರು ವಿದೇಶ ಪ್ರವಾಸದಲ್ಲಿದ್ದರು. ಅಂದು ಅವರು ದೇಶದಲ್ಲಿ ಇರಲೇ ಇಲ್ಲ. ಜೊತೆಗೆ ಪಾಸ್‌ಪೋರ್ಟ್ ಮತ್ತು ವೀಸಾ ದಾಖಲೆ ಬಹಿರಂಗಪಡಿಸಲಾಗಿದ್ದು, ಇದನ್ನು ಗಮನಿಸಿದ ನ್ಯಾಯಾಲಯ, ಈ ಪ್ರಕರಣದಲ್ಲಿ ಶರಣರನ್ನು ಖುಲಾಸೆಗೊಳಿಸಿ ಆದೇಶಿಸಿದೆ.

Comments are closed.