K L Rahul : ಬೌಲರ್ ಗೆ ಪಂದ್ಯದ ನಡುವೆ ಕನ್ನಡದಲ್ಲೇ ಬೈದ ಕೆ ಎಲ್ ರಾಹುಲ್!! ವಿಡಿಯೋ ವೈರಲ್

Share the Article

K L Rahul : ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಏಕದಿನ ಸರಣಿಯಲ್ಲಿ ನಡೆಯುತ್ತಿದೆ. ಡಿಸೆಂಬರ್ ಮೂರರಂದು ರಾಯ್‌ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಸಂದರ್ಭದಲ್ಲಿ ತೀವ್ರ ಒತ್ತಡಕ್ಕೆ ಒಳಗಾದ ತಂಡದ ನಾಯಕ ಕೆಎಲ್ ರಾಹುಲ್ ಅವರು ಬೌಲರ್ ಗೆ ಪಂದ್ಯದ ನಡುವೆ ಕನ್ನಡದಲ್ಲಿ ಬೈದಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್ ಮಾಡುತ್ತಿದ್ದ ವೇಳೆ ಇನ್ನೇನು ಪಂದ್ಯ ಮುಗಿಯುವ ಸನಿಹದಲ್ಲಿದ್ದಾಗ ಕೆಎಲ್ ರಾಹುಲ್ ಬೌನ್ಸರ್ ಹಾಕಬೇಡ ಎಂದು ಸಲಹೆ ನೀಡಿದ್ದಾರೆ. ಸದಾ ತಾಳ್ಮೆಯಿಂದ ಮಾತನಾಡುವ ರಾಹುಲ್ ಇಲ್ಲಿ ತನ್ನ ಜೂನಿಯರ್ ಪ್ರಸಿದ್ಧ್‌ಗೆ ಕನ್ನಡದಲ್ಲಿ ಕಿವಿಮಾತು ಹೇಳಿದ್ದಾರೆ. ಬ್ಯಾಟ್ಸ್‌ಮನ್‌ಗಳಿಗೆ ಅರ್ಥವಾಗಬಾರದು ಎಂಬ ಕಾರಣಕ್ಕೆ ಇಬ್ಬರು ಕನ್ನಡದಲ್ಲಿ ಮಾತನಾಡಿಕೊಂಡಿದ್ದಾರೆ.

ಈ ವೇಳೆ ರಾಹುಲ್ ‘ಪ್ರಸಿದ್ಧ್ ನಿನ್ ತಲೆ ಓಡಿಸಬೇಡ, ಹೇಳಿದ್ದು ಹಾಕು. ಹೇಳಿದ್ದೀನಿ ಏನು ಹಾಕಬೇಕಂತ ಅದನ್ನೇ ಹಾಕು’ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಸಿದ್ಧ್ ಕೃಷ್ಣ ‘ತಲೆಗೆ ಹಾಕ್ಲಾ?’ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ‘ತಲೆಗೆಲ್ಲ ಬೇಡ ಈಗ’, ‘ಹೇಳಿ ಬಂದಿದ್ದೀನಿ ತಲೆಗೆ ಹಾಕ್ತಾ ಇದಿಯಲ್ಲ ಮಗಾ’ ಎಂದು ಅಸಮಾಧಾನದಿಂದ ಉತ್ತರ ನೀಡಿದ್ದಾರೆ. ನಾಯಕ ರಾಹುಲ್ ಹಾಗೂ ಬೌಲರ್ ಪ್ರಸಿದ್ಧ್ ಕೃಷ್ಣ ನಡುವಿನ ಈ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

Comments are closed.