Yellow Metro : ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ – ‘ಯೆಲ್ಲೋ ಲೈನ್’ ಗೆ ಬಂತು ಮತ್ತೊಂದು ಹೊಸ ರೈಲು, ಕಾಯೋ ಸಮಯ ಇಳಿಕೆ

Yellow Metro : ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಯೆಲ್ಲೋ ಲೈನ್ ಬಳಕೆದಾರರಿಗೆ, ಬಿಎಂಆರ್ಸಿಎಲ್ ಹೊಸ ವರ್ಷದ ಆರಂಭಕ್ಕೆ ಸಿಹಿ ಸುದ್ದಿ ನೀಡಿದ್ದು ಆರನೇ ರೈಲನ್ನು ಕಲ್ಕತ್ತಾದಿಂದ ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

ಹೌದು, ಕೊಲ್ಕತ್ತಾದ ಟಿಟಾಗರ್‌ನಿಂದ ಹೊರಟಿದ್ದ ಆರನೇ ಡ್ರೈವರ್ ಲೆಸ್ ಮೆಟ್ರೋ ರೈಲು ಸೆಟ್ ನಿನ್ನೆ ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋವನ್ನು ತಲುಪಿದೆ. ಈ ಹೊಸ ರೈಲು ಸೇರ್ಪಡೆಯಿಂದ ರೈಲುಗಳ ನಡುವಿನ ಓಡಾಟದ ಸಮಯ ಮತ್ತಷ್ಟು ಇಳಿಕೆಯಾಗಲಿದೆ.
ಈ ಹೊಸ ರೈಲು ಡಿಸೆಂಬರ್ ಅಂತ್ಯಕ್ಕೆ ವಾಣಿಜ್ಯ ಸೇವೆ ಆರಂಭಿಸಲಿದೆ. ಸದ್ಯ ಯೆಲ್ಲೋ ಮಾರ್ಗದಲ್ಲಿ 15 ರಿಂದ 18 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತಿವೆ. ರೈಲುಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಯಾಣಿಕರು ಆಗಾಗ ಟೀಕಿಸುತ್ತಿದ್ದರು. ಹೊಸ ರೈಲು ಓಡಾಟ ಆರಂಭವಾದರೆ ರೈಲುಗಳ ನಡುವಿನ ಓಡಾಟದ ಸಮಯ 10 ರಿಂದ 12 ನಿಮಿಷಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಆ ಮೂಲಕ ಪ್ರಯಾಣ ಸುಗುಮವಾಗಲಿದೆ.
ಕಳೆದ ನವೆಂಬರ್ 18ರಂದು ಕೊಲ್ಕತ್ತಾದ ಟಿಟಾಘರ್ ನಿಂದ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದ 6ನೇ ಮೆಟ್ರೋ ರೈಲು ಸೆಟ್ ಅನ್ನು ಲಾರಿ ಮೂಲಕ ಕಳುಹಿಸಲಾಗಿತ್ತು. ಎರಡು ವಾರಗಳ ರಸ್ತೆ ಹೆದ್ದಾರಿ ಪ್ರಯಾಣ ಮುಗಿಸಿದ ಲಾರಿಗಳೂ ಬೆಂಗಳೂರಿನ ಹೆಬ್ಬಗೋಡಿ ಮೆಟ್ರೋ ಡಿಪೋಗೆ ವಾರಾಂತ್ಯಕ್ಕೆ ಆಗಮಿಸಿವೆ. ಒಟ್ಟು 06ಬೋಗಿಗಳ ಪೈಕಿ ಮೂರು ಮೆಟ್ರೋ ಬೋಗಿಗಳು ಆಗಮಿಸಿವೆ. ಉಳಿದ ಮೂರು ಬೋಗಿಗಳು ಶೀಘ್ರವೇ ಹೆಬ್ಬಗೋಡಿ ಡಿಪೋಗೆ ಬರಲಿವೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Comments are closed.