West Bengal : ರಸ್ತೆಯಲ್ಲಿ ಬಿದ್ದಿತ್ತು ಆಗಷ್ಟೇ ಹುಟ್ಟಿದ ಮಗು – ರಾತ್ರಿ ಇಡೀ ಜೋಪಾನ ಮಾಡಿದ ಬೀದಿ ನಾಯಿಗಳು !!

West Bengal : ಬೀದಿ ನಾಯಿಗಳೆಂದರೆ ಅನೇಕರಿಗೆ ಭಯ. ಮಕ್ಕಳು ಬಿಡಿ ದೊಡ್ಡವರು ಕೂಡ ಅವುಗಳಿರುವ ಕಡೆ ಸುಳಿಯಲು ಭಯಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುವ ವಿಚಾರವನ್ನು ಸದಾ ಕೇಳುತ್ತಲೇ ಇರುತ್ತೇವೆ. ಆದರೆ ಪಶ್ಚಿಮ ಬಂಗಾಳದಲ್ಲೊಂದು ಅಪರೂಪದ ಘಟನೆ ನಡೆದಿದ್ದು ರಸ್ತೆಯಲ್ಲಿ ಬಿದ್ದಿದ್ದ ನವಜಾತ ಶಿಶುವನ್ನು ಬೀದಿ ನಾಯಿಗಳು ತನ್ನ ಮರಿಯಂತೆ ಜೋಪಾನ ಮಾಡಿದ್ದಾವೆ.

ಹೌದು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಕಾರ್ಮಿಕರಿರುವ ವಸಾಹತು ಪ್ರದೇಶದ ಶೌಚಾಲಯದ ಹೊರಗೆ ಕೆಲವು ಗಂಟೆಗಳ ಹಿಂದೆ ಜನಿಸಿದ್ದ ಶಿಶು ಪತ್ತೆಯಾಗಿದೆ. ಮಗು ಹುಟ್ಟಿದಾಗ ಅದರ ಮೇಲಿದ್ದ ರಕ್ತದ ಕಲೆಗಳನ್ನು ಕೂಡ ಯಾರು ಒರೆಸಿರಲಿಲ್ಲ. ಮಗುವಿಗೆ ಬಟ್ಟೆ ಇರಲಿಲ್ಲ, ಮೈಮೇಲೆ ಯಾವುದೇ ಬೆಚ್ಚನೆಯ ವಸ್ತುಗಳು ಕೂಡ ಇರಲಿಲ್ಲ.ಆದರೆ ಆ ಮಗುವನ್ನು ಕಂಡ ಬೀದಿ ನಾಯಿಗಳು ಸುತ್ತಲೂ ನಿಂತು ಅದರ ರಕ್ಷಣೆ ಮಾಡಿವೆ.
ಜನರು ಪ್ರತಿದಿನ ಓಡಿಸುವ ನಾಯಿಗಳ ಗುಂಪೇ ಈ ನವಜಾತ ಶಿಶುವಿನ ರಕ್ಷಣೆಗೆ ನಿಂತಿತ್ತು, ನಾಯಿಯ ಗುಂಪು ಮಗುವಿನ ಸುತ್ತಲೂ ಕುಳಿತು ಅದಕ್ಕೆ ರಕ್ಷಣೆ ನೀಡಿದ್ದವು. ಬೊಗಳಲೂ ಇಲ್ಲ, ಅಲ್ಲಿಂದ ಕದಲಲೂ ಇಲ್ಲ ರಾತ್ರಿ ಇಡೀ ಕುಳಿತು ಕಾವಲು ಕಾದಿವೆ. ಬೆಳಗಿನ ಬೆಳಕನ್ನು ಹೊರತುಪಡಿಸಿ ರಾತ್ರಿ ಇಡೀ ನಾಯಿಗಳು ಯಾರನ್ನೂ ಅಥವಾ ಯಾವ ಪ್ರಾಣಿಯನ್ನೂ ಹತ್ತಿರ ಬಿಡಲಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.
ಅಲ್ಲದೆ ನಮಗೆ ಎಚ್ಚರವಾದಾಗ ಈ ಘಟನೆ ನೋಡಿ ರೋಮಾಂಚನವಾಯಿತು ಎಂದು ಸುಕ್ಲಾ ಮಂಡಲ್ ಎಂಬುವವರು ತಿಳಿಸಿದ್ದಾರೆ. ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ. ಅವು ಎಚ್ಚರವಾಗಿಯೇ ಇದ್ದವು, ತಾಯಿಯಂತೆ ಶಿಶುವನ್ನು ಕಾಳಜಿ ಮಾಡಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದರು. ತಲೆಯ ಮೇಲಿನ ರಕ್ತ ಮಗು ಹುಟ್ಟಬೇಕಿದ್ದಾಗ ಆಗಿದ್ದಾಗಿರಬಹುದು ಎಂದು ಹೇಳಿದ್ದಾರೆ.
Comments are closed.