ಅಕ್ರಮ ಚಟುವಟಿಕೆಗೆ ಡ್ರೋನ್‌ ಗಸ್ತು: ಪೊಲೀಸರಿಂದ ಹೊಸ ಪ್ರಯೋಗ

Share the Article

Drone Beat: ಅಪರಾಧ ತಡೆಗೆ ಪೊಲೀಸ್‌ ಇಲಾಖೆ ಮಹತ್ವದ ಕಾರ್ಯಾಚರಣೆ ಆರಂಭ ಮಾಡಿದೆ. ಕಾನೂನು ಬಾಹಿರ ಚಟುವಟಿಕೆಗಳು, ಜೂಜಾಟ, ಕೋಳಿ ಪಂದ್ಯ ಮತ್ತು ಅಕ್ರಮ ಚಟುವಟಿಕೆಗಳ ತಡೆಗೆ ಕೋಲಾರ ಜಿಲ್ಲೆಯಲ್ಲಿ ಡ್ರೋನ್‌ ಬೀಟ್‌ ಎನ್ನುವ ಹೊಸ ಪ್ರಯೋಗ ಆರಂಭ ಮಾಡಿದೆ. ಮೊದಲ ಬಾರಿಗೆ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಇದನ್ನು ಕಾರ್ಯಾಚರಣೆ ಆರಂಭ ಮಾಡಲಿದೆ.

ಕೋಲಾರ ಜಿಲ್ಲಾ ಪೊಲೀಸ್‌ ಇಲಾಖೆ, ರಾಜ್ಯದಲ್ಲಿ ಡ್ರೋನ್‌ ಗಸ್ತು ಕಾರ್ಯಾಚರಣೆ ಆರಂಭಿಸಿದೆ. ಮೂರು ಡ್ರೋನ್‌ಗಳು ಗಸ್ತು ಕಾರ್ಯಾಚರಣೆ ಆರಂಭ ಮಾಡಲಾಗಿದ್ದು, ಪ್ರತಿದಿನ ಒಂದೊಂದು ತಾಲೂಕಿಗೆ ಡ್ರೋನ್‌ನನ್ನು ಕಳುಹಿಸಕೊಡಲಾಗುತ್ತದೆ. ಇಲಾಖೆ 8 ಜನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

5 ಕಿ.ಮೀ. ದೂರದಲ್ಲಿ ನಡೆಯುವ ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆಗಳನ್ನು ಪತ್ತೆ ಮಾಡಬಹುದು. 112 ನಂಬರ್‌ಗೆ ದೂರು ಬಂದರೆ ಡ್ರೋನ್‌ ಗಸ್ತು ಮಾಡಲಾಗುತ್ತದೆ. ಬೆಟ್ಟ, ಅರಣ್ಯ ಪ್ರದೇಶಗಳು ಮತ್ತು ನಿರ್ಜನ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ಡ್ರೋನ್‌ ಮುಖಾಂತರ ಪತ್ತೆ ಹಚ್ಚಿ ಡ್ರೋನ್‌ ಬೀಟ್‌ ಮಾಡಲಾಗುವುದು.

Comments are closed.