Bangalore: ಪ್ರೀತಿಸಿ ಮದ್ವೆಯಾಗಿದ್ದ ನವವಿವಾಹಿತೆ ಮೂರೇ ತಿಂಗಳಿಗೆ ಆತ್ಮಹತ್ಯೆ!

Share the Article

Bangalore: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಮೂರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅಂದ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ನಡೆದಿದೆಅಮೂಲ್ಯ (23) ಎಂಬಾಕೆ ತನ್ನ ಗಂಡ ಅಭಿಷೇಕ್‌ ಮನೆಯಲ್ಲಿ ನೇಣಿಗೆ ಶರಣಾದ ವಿವಾಹಿತೆ.

ಅಮೂಲ್ಯ-ಅಭಿಷೇಕ್‌ ಪ್ರೇಮಕ್ಕೆ ಮನೆಯವರ ವಿರೋಧವಿತ್ತು. ಕೊನೆಗೆ ಹೇಗೋ ಇಬ್ಬರು ಕುಟುಂಬದವರನ್ನ ಒಪ್ಪಿಸಿ ಮೂರು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರೋದು ಅನುಮಾನ ಮೂಡಿಸಿದೆ. ಮೃತ ಅಮೂಲ್ಯ ಕುಟುಂಬಸ್ಥರು ಮಗಳ ಸಾವಿಗೆ ಪತಿ ಅಭಿಷೇಕ್‌ ಕಾರಣ ಅಂತ ಆರೋಪಿಸಿದ್ದಾರೆ. ಪತಿಗೆ ಪತ್ನಿಯ ಮೇಲೆ ಅನುಮಾನ ಇತ್ತು, ಯಾರ ಜೊತೆಗೂ ಮಾತಾಡೋಕೆ ಬಿಡ್ತಾ ಇರಲಿಲ್ಲ. ಆಡುಗೆ ಮಾಡೋಕೆ ಬರಲ್ಲ ಅಂತಾ ಕಿರುಕುಳ ಕೊಡ್ತಾ ಇದ್ರು. ಅವ್ರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪತಿ ಅಭಿಷೇಕ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

Comments are closed.