ತನಗಿಂತ ಸುಂದರವಾಗಿ ಯಾರೂ ಕಾಣಬಾರದೆಂದು 6 ವರ್ಷದ ಹುಡುಗಿಯನ್ನು ಕೊಲೆ ಮಾಡಿದ ಮಹಿಳೆ

Share the Article

ಚಂಡೀಗಢ: ತನಗಿಂತ ಯಾರು ಕೂಡಾ ಸುಂದರವಾಗಿ ಕಾಣಬಾರದು ಎಂದು 6 ವರ್ಷದ ಹುಡುಗಿಯನ್ನು ಮಹಿಳೆಯೊಬ್ಬರು ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ.

ಮಹಿಳೆಯೊಬ್ಬಳು ತನ್ನ 6 ವರ್ಷದ ಸೊಸೆಯನ್ನೇ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪೂನಂ ತನ್ನ ಸೊಸೆಯನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. 2023 ರಲ್ಲಿ ತನ್ನ ಮಗು ಸೇರಿ ಮೂವರು ಮಕ್ಕಳನ್ನು ಈಕೆ ಕೊಲೆ ಮಾಡಿದ್ದಳು. ಅವರನ್ನು ಕೂಡಾ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಳು.

ವಿಧಿ (6) ಕೊಲೆಯಾದ ಮಗು. ಪಾಣಿಪತ್‌ನ ಇಸ್ರಾನಾ ಪ್ರದೇಶದ ನೌಲ್ತಾ ಗ್ರಾಮಕ್ಕೆ ತಮ್ಮ ಕುಟುಂಬದ ಜೊತೆ ಸಂಬಂಧಿಕರ ಮದುವೆಗೆ ಬಂದಿದ್ದಳು. ಆಕೆಯ ಅಜ್ಜ ಪಾಲ್‌ ಸಿಂಗ್‌, ಅಜ್ಜಿ ಓಂವತಿ, ತಂದೆ ಸಂದೀಪ್‌, ತಾಯಿ ಜೊತೆ ಬಂದಿದ್ದಳು.

ಮದುವೆ ಮನೆಯಲ್ಲಿ ವಿಧಿ ಕಾಣೆಯಾಗಿದ್ದಳು. ಕುಟುಂಬದವರು ಎಲ್ಲಾ ಕಡೆ ಹುಡುಕಿದ್ದಾರೆ. ಅಜ್ಜಿ ತನ್ನ ಸಂಬಂಧಿಕರ ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್‌ ರೂಂ ಗೆ ಹೋಗಿ ನೋಡಿದಾಗ ಬಾಲಕಿ ಶವ ಪತ್ತೆಯಾಗಿದೆ. ಪೂನಂ (ಆರೋಪಿ) ತನಗಿಂತ ಯಾರು ಕೂಡಾ ಚೆನ್ನಾಗಿ ಕಾಣಬಾರದು ಎಂದು ಬಯಸಿದ್ದಳು. ಚಿಕ್ಕ ಮಕ್ಕಳು ಮತ್ತು ಸುಂದರ ಹುಡುಗಿಯರನ್ನೇ ಟಾರ್ಗೆಟ್‌ ಮಾಡಿ ಕೊಲ್ಲುತ್ತಿದ್ದಳು. ಈಕೆ ತಾನು ಹೆತ್ತ ಮಗನನ್ನು ಈ ರೀತಿಯೇ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಳು ಎಂದು ಪೊಲೀಸ್‌ ತನಿಖೆಯಿಂದ ತಿಳಿದು ಬಂದಿದೆ.

ಪೂನಂ 2023 ರಲ್ಲಿ ತನ್ನ ಅತ್ತಿಗೆಯ ಮಗಳನ್ನೇ ಕೊಂದಿದ್ದಳು. ಅದೇ ವರ್ಷ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು. ಈ ವರ್ಷದ ಆಗಸ್ಟ್‌ನಲ್ಲಿ ಪೂನಂ ಸಿವಾ ಗ್ರಾಮದಲ್ಲಿ ಇನ್ನೋರ್ವ ಹುಡುಗಿಯನ್ನು ಕೊಲೆ ಮಾಡಿದ್ದಳು. ಈ ಎಲ್ಲಾ ಪ್ರಕರಣಗಳಲ್ಲಿ ಇದೊಂದು ಆಕಸ್ಮಿಕ ಸಾವು ಎನ್ನುವ ರೀತಿ ಬಿಂಬಿಸಲಾಗಿತ್ತು.

Comments are closed.