Parliament : 8ನೇ ವೇತನ ಆಯೋಗದ ಕುರಿತು ಕೇಂದ್ರದಿಂದ ಹೊರಬಿತ್ತು ಬಿಗ್ ಅಪ್ಡೇಟ್

Parliament : ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ಕನಸಾದ ಎಂಟನೇ ವೇತನ ಆಯೋಗ ಜಾರಿಗೆ ಸರ್ಕಾರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಈ ಕುರಿತಾಗಿ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ.

ಈಗಾಗಲೇ ಚಳಿಗಾಲದ ಸಂಸತ್ತು ಅಧಿವೇಶನ ಶುರುವಾಗಿದ್ದು, ಸಂಸತ್ತಿನಲ್ಲಿ ಈ ಕುರಿತಾಗಿ ಪ್ರಶ್ನೆ ಒಂದು ಬಂದಿತ್ತು. 8ನೇ ವೇತನ ಆಯೋಗ ರಚನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದೊಂದಿಗೆ ಡಿಎ ಅಥವಾ ತುಟ್ಟಿಭತ್ಯೆಯ ಯಾವುದೇ ಭಾಗವನ್ನು ಸಂಯೋಜಿಸುವ ಯಾವುದೇ ಯೋಜನೆಯನ್ನು ಪ್ರಸ್ತುತ ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ.
ಅಲ್ಲದೆ “ಜೀವನ ವೆಚ್ಚವನ್ನು ಸರಿಹೊಂದಿಸಲು ಮತ್ತು ಹಣದುಬ್ಬರದ ಕಾರಣದಿಂದಾಗಿ ನೈಜ ಮೌಲ್ಯದಲ್ಲಿನ ಸವೆತದಿಂದ ಮೂಲ ವೇತನ / ಪಿಂಚಣಿಯನ್ನು ರಕ್ಷಿಸುವ ಆದೇಶದಲ್ಲಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕ ಬ್ಯೂರೋ ಬಿಡುಗಡೆ ಮಾಡಿದ ಆಲ್ ಇಂಡಿಯಾ ಕನ್ಸ್ಯೂಮರ್ ಪ್ರೈಸ್ ಇನ್ಡೆಕ್ಸ್ (ಎಎಲ್ಸಿಪಿಐ-ಎಲ್ಡಬ್ಲ್ಯೂ) ಆಧಾರದ ಮೇಲೆ ಪ್ರತಿ 6 ತಿಂಗಳಿಗೊಮ್ಮೆ ಡಿಎ / ಡಿಆರ್ ದರಗಳನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಲಾಗಿದೆ.
Comments are closed.