ಮಂಗಳೂರು: ಮಂಗಳೂರಿಗೆ ಕೆ.ಸಿ.ವೇಣುಗೋಪಾಲ್‌ ಆಗಮನ: ಕೈ ಕಾರ್ಯಕರ್ತರಿಂದ ಡಿ.ಕೆ….ಡಿ.ಕೆ…ಘೋಷಣೆ

Share the Article

ಮಂಗಳೂರು: ಸಿಎಂ ಹಾಗೂ ಡಿಸಿಎಂ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ನಡೆದ ನಂತರ ಕೈ ನಾಯಕರ ನಡೆ ಬಹಳ ಕುತೂಹಲಕಾರಿಯಾಗಿದೆ. ಇಂದು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌ ಅವರು ಮಂಗಳೂರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಡಿ.ಕೆ. ಡಿಕೆ ಎಂದು ಕೈ ಕಾರ್ಯಕರ್ತರು ಕೂಗಿದ ಪ್ರಸಂಗ ನಡೆಯಿತು.

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಈ ಘಟನೆ ನಡೆದಿದೆ.

ಮಂಗಳೂರು ವಿವಿಯಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧಿನಾರಾಯಣ ಗುರು ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ವೇಣುಗೋಪಾಲ್‌ ಅವರನ್ನು ಕಾರ್ಯಕರ್ತರು ಸ್ವಾಗತಿಸಿದ್ದು, ಡಿಕೆ ಡಿಕೆ ಎಂದು ಘೋಷಣೆ ಕೂಗಿದರು. ಮಂಗಳೂರಿಗೆ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಭೇಟಿ ನೀಡಿದ್ದು, ವೇಣುಗೋಪಾಲ್‌ ಹಾಗೂ ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ.

Comments are closed.