Karnataka Gvt : ರಾಜ್ಯದ ಅರ್ಚಕರ ಮಕ್ಕಳಿಗೆ ಒಂದು 1ಲಕ್ಷ ಪ್ರೋತ್ಸಾಹ ಧನ ಘೋಷಸಿದ ಸರ್ಕಾರ – ಹೀಗೆ ಅರ್ಜಿ ಸಲ್ಲಿಸಿ

Karnataka Gvt : ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ರಾಜ್ಯದ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರ ಮಕ್ಕಳಿಗೆ ಕರ್ನಾಟಕ ಸರ್ಕಾರವು ಒಂದು ಲಕ್ಷ ಪ್ರೋತ್ಸಾಹ ಧನವನ್ನು ಘೋಷಿಸಿದೆ.

ಹೌದು, ಅರ್ಚಕರು, ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 2024-25 ಸಾಲಿಗೆ ಪ್ರೋತ್ಸಾಹಧನ ನೀಡಲು ಮುಂದಾಗಿದೆ. ಈ ಮೂಲಕ ಧಾರ್ಮಿಕ ಸೇವೆಯಲ್ಲಿರುವವರ ಕುಟುಂಬಕ್ಕೆ ಶಕ್ತಿ ತುಂಬುವ, ಅವರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೆನ್ನೆಲುಬಾಗುವ ನಿಟ್ಟಿನಲ್ಲಿ ಪ್ರೋತ್ಸಾಹ ಧನವನ್ನು ಘೋಷಿಸಿ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ.
ಯಾರಿಗೆ ಎಷ್ಟು ಪ್ರೋತ್ಸಾಹ ಧನ ಸಿಗುತ್ತದೆ?
ಪಿಯುಸಿ, ಐಟಿಐ / ಜೆ.ಒ.ಸಿ/ಡಿಪ್ಲೋಮಾ ಓದುವವರಿಗೆ ರೂ . 5,000/-
ಪದವಿ ಶಿಕ್ಷಣ ಪಡೆಯುತ್ತಿರುವವರಿಗೆ ರೂ. 7,000/-
ಸ್ನಾತಕೋತ್ತರ ಪದವಿ ಪಡೆಯುತ್ತಿರುವವರಿಗೆ ರೂ. 15,000/- ಭತ್ಯೆ ನೀಡಲಾಗುತ್ತದೆ.
ಇದೇ ರೀತಿಯಾಗಿ, ಆಯುರ್ವೇದಿಕ್, ಹೋಮಿಯೋಪತಿ ಮತ್ತು ಯುನಾನಿಯಂತಹ ಇತರೆ ವೈದ್ಯಕೀಯ ಕೋರ್ಸ್ಗಳಿಗೆ ಹಾಗೂ ತಾಂತ್ರಿಕ ಶಿಕ್ಷಣ (ಇಂಜಿನಿಯರಿಂಗ್) ಓದುತ್ತಿರುವವರಿಗೆ ರೂ. 25,000/- ಸಹಾಯಧನ ದೊರೆಯಲಿದೆ.ಹಾಗೆಯೇ, ವೈದ್ಯಕೀಯ/ ಡೆಂಟಲ್ ಶಿಕ್ಷಣ ಓದುವವರಿಗೆ 50,000/- ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ 1,00,000/- ರೂ ಮೊತ್ತದ ಪ್ರೋತ್ಸಾಹ ಧನ ಕೊಡಲಾಗುತ್ತದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಅರ್ಹರು ಧಾರ್ಮಿಕ ದತ್ತಿ ಆಯುಕ್ತರ ಕಚೇರಿ/ಸಂಬಂಧಪಟ್ಟ ಜಿಲ್ಲಾಧಿಕಾರಿ ಅಥವಾ ತಾಲೂಕು ತಹಶಿಲ್ದಾರ್ ಕಚೇರಿಯಲ್ಲಿ ಅರ್ಜಿ ನಮೂನೆಗಳನ್ನು ಪಡೆದು ದೃಢೀಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಧಾರ್ಮಿಕ ದತ್ತಿ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.
Comments are closed.