Janvi: ಬಿಗ್ ಬಾಸ್ ಮನೆಗೆ ಹೋಗಲು ಜಾನ್ವಿ ಖರ್ಚು ಮಾಡಿದ್ದೆಷ್ಟು?

Share the Article

Janvi: ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಿಂದ ಕಳೆದ ವಾರ ಅಂತ್ಯ ಜಾನವಿ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಬಳಿಕ ಅವರನ್ನು ಮನೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಮನೆಗೆ ಕರೆದುಕೊಳ್ಳಲಾಯಿತು. ನಂತರದಲ್ಲಿ ಅನೇಕ ಮಾಧ್ಯಮಗಳು ಅವರನ್ನು ಸಂದರ್ಶನ ಮಾಡುತ್ತಿವೆ. ಈ ವೇಳೆ ಅವರು ಬಿಗ್ ಬಾಸ್ ಮನೆಗೆ ಹೋಗಲು ಖರ್ಚು ಮಾಡಿರುವ ಹಣದ ಕುರಿತು ಮಾಹಿತಿ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಅವರು ಡ್ರೆಸ್ ಹಾಗೂ ಮೇಕಪ್ ಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಿದ್ದರು. ಅವರು ಒಂದೇ ಒಂದು ದಿನ ಕೂಡ ನಾರ್ಮಲ್ ಡ್ರೆಸ್ ನಲ್ಲಿ ಕಾಣಿಸಿಕೊಂಡವರಲ್ಲ. ಎದ್ದ ತಕ್ಷಣ ತಿಂಡಿ ತಿಂದು, ಸ್ನಾನ ಮಾಡಿ ರೆಡಿ ಆಗಿ ಕುಳಿತುಕೊಳ್ಳುತ್ತಿದ್ದರು. ಈಗ ಜಾನ್ವಿ ಅವರು ಇದಕ್ಕೆಲ್ಲ ಎಷ್ಟು ಖರ್ಚಾಯಿತು ಎಂಬುದನ್ನು ವಿವರಿಸಿದ್ದಾರೆ.

ಈ ಕುರಿತಾಗಿ ಮಾತನಾಡಿದ ಅವರು ‘ನಾನು ಡ್ರೆಸ್ಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಿದ್ದೆ. ಬಿಗ್ ಬಾಸ್ ರೀಚ್ ಏನು ಎಂಬುದು ನನಗೆ ಗೊತ್ತಿತ್ತು. ಕೋಟ್ಯಂತರ ಜನರು ನೋಡುತ್ತಿರುತ್ತಾರೆ. ಹೀಗಾಗಿ, ಹೂಡಿಕೆ ಮಾಡಲೇಬೇಕಿತ್ತು. ಡ್ರೆಸ್ ವಿಚಾರದಲ್ಲಿ ಕಾಂಪ್ರಮೈಸ್ ಆಗಲೇಬಾರದು ಎಂದುಕೊಂಡಿದ್ದೆ. ಪಿಆರ್, ಮೇಕಪ್ ಹಾಗೂ ಡ್ರೆಸ್ನಿಂದ ನಾಲ್ಕು ಲಕ್ಷ ರೂಪಾಯಿ ಖರ್ಚಾಗಿದೆ’ ಎಂದು ಜಾನ್ವಿ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Comments are closed.