ಭಾರೀ ಆಕ್ರೋಶದ ಹಿನ್ನೆಲೆ, ಸಂಚಾರಿ ಆ್ಯಪ್ ಕಡ್ಡಾಯ ಅಲ್ಲ ಅಂದ ಕೇಂದ್ರ

Share the Article

ಹೊಸದಿಲ್ಲಿ: ಮೊಬೈಲ್ ಕಳ್ಳತನ ಮತ್ತು ಆನ್ಲೈನ್ ವಂಚನೆ ತಡೆಯಲು ಕೇಂದ್ರ ಬಿಡುಗಡೆ ಮಾಡಿರುವ ‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಸ್ಪಷ್ಟನೆ ನೀಡಿದೆ. ಈ ಆ್ಯಪ್ ಕಡ್ಡಾಯ ಎಂದು ಸರ್ಕಾರ ಈ.ಮೊದಲು ಹೇಳಿತ್ತು. ಸರ್ಕಾರದ ಈ ಆದೇಶ ಭಾರೀ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ.

ಮೊಬೈಲ್ ಕೊಳ್ಳುವಾಗಲೇ ಸಂಚಾರ ಸಾಥಿ ಆ್ಯಪ್ ಮೊಬೈಲ್ ನಲ್ಲಿರಲಿದ್ದು ಅದನ್ನು ಕಡ್ಡಾಯ ಎನ್ನಲಾಗಿತ್ತು ಆದರೆ ಇದೀಗ ಅಕ್ರೋಶಗಳ ಹಿನ್ನೆಲೆಯಲ್ಲಿ ಗ್ರಾಹಕರು ಬೇಕಿದ್ದರೆ ಅದನ್ನು ಡಿಲೀಟ್ ಮಾಡಬಹುದು ಎಂದಿದ್ದಾರೆ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ.

ಸಂಚಾರ್ ಸಾಥಿ ಆ್ಯಪನ್ನು ಗ್ರಾಹಕರಿಗೆ ಅವಶ್ಯಕತೆಯಿಲ್ಲದಿದ್ದರೆ ಬಳಕೆದಾರರು ಡಿಲೀಟ್ ಮಾಡ ಹುದು ಎಂದು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ‘ಎಲ್ಲರಿಗೂ ಈ ಆ್ಯಪ್ ಪರಿಚಯಿಸುವುದು ನಮ್ಮ ಕರ್ತವ್ಯ. ಈ ಆ್ಯಪ್ ಐಚ್ಛಿಕವಾಗಿರಲಿದ್ದು, ಅದನ್ನು ಇಟ್ಟುಕೊಳ್ಳುವುದು ಅಥವಾ ಡಿಲೀಟ್ ಮಾಡಬಹುದಾಗಿದ್ದು, ಇದು ಸಂಪೂರ್ಣವಾಗಿ ಬಳಕೆದಾರರಿಗೆ ಸೇರಿದ್ದು’ ಎಂದು ಅವರು ತಿಳಿಸಿದ್ದಾರೆ.
ಇನ್ನು ಈ ಆದೇಶದ ಬಗ್ಗೆ ತೀವ್ರವಾಗಿ ಟೀಕಿಸುತ್ತಿರುವ ವಿಪಕ್ಷಗಳಿಗೆ ಪ್ರತಿಕ್ರಿಯಿಸಿರುವ ಸಿಂಧಿಯಾ,’ ಈ ಆ್ಯಪ್ ಅನ್ನು ಬೇಹುಗಾರಿಕೆಗೆ ಅಥವಾ ಇಲ್ಲಿಯವರು ಕಾರಣಕ್ಕೆ ನಿರ್ಮಿಸಲಾಗಿಲ್ಲ. ಸೈಬರ್ ಭದ್ರತೆಗಾಗಿ ಇದು ಕಾರ್ಯನಿರ್ವಹಿಸಲಿದ್ದು ನೋಂದಣಿ ಮಾಡಿಸಿದರಷ್ಟೇ ಆ್ಯಪ್ ಕಾರ್ಯನಿರ್ವಹಿಸಲಿದೆ ಭದ್ರತೆಯ ದೃಷ್ಟಿಯಿಂದ ಜನ ಇದನ್ನು ಸ್ವಾಗತಿಸಬೇಕಾಗಿದೆ’ ಎಂದಿದ್ದಾರೆ.

ಈ ಆ್ಯಪ್ ನಿಂದ ಜನರ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ, ಜನರು ತಮ್ಮ ಕುಟುಂಬದ ಜತೆ ಮಾತಾಡೋದು ಕೇಳೋದು ಇವರಿಗೂ ಯಾಕೆ ಬೇಕು? ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದರು. ಕಾಂಗ್ರೆಸ್ ನಾಯಕ, ಮತ್ತು ಇತ್ತೀಚೆಗೆ ಬಿಜೆಪಿ ಮತ್ತು ಮೋದಿ ವಲಯಗಳಲ್ಲಿ ಕೆಲಸಮಾಡುತ್ತಿರುವ ಶಶಿ ತರೂರ್ ಕೂಡಾ ಕೇಂದ್ರದ ಈ ನಡೆಯನ್ನು ಟೀಕಿಸಿದ್ದು ವಿಶೇಷ. ಒಟ್ಟಾರೆ ಪ್ರತಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೊನೆಗೂ ಕಡ್ಡಾಯ ಅಂದ ಮರುದಿನವೇ ಕಡ್ಡಾಯವಲ್ಲ ಅಂದಿದೆ.

Comments are closed.