Samanta: 50 ವರ್ಷದ ನಿರ್ದೇಶಕನೊಂದಿಗೆ 2ನೇ ಮದುವೆಯಾದ ನಟಿ ಸಮಂತ!!

Share the Article

Samanta: ಬಹಳ ದಿನಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ನಟಿ ಸಮಂತಾ ರುತ್ ಪ್ರಭು ನಿರ್ದೇಶಕ ರಾಜ್ ನಿಡಿಮೋರು ಸೋಮವಾರ ಬೆಳಿಗ್ಗೆ ತಮಿಳುನಾಡಿನ ಈಶ ಫೌಂಡೇಶನ್ ನಲ್ಲಿ ಮದುವೆಯಾಗಿದ್ದಾರೆ.

ಯಸ್, 50 ವರ್ಷ ವಯಸ್ಸಾಗಿರುವ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಹೆಸರಾಂತ ನಟಿ ಸಮಂತ ರುತ್ ಪ್ರಭು ಅವರು ಮದುವೆಯಾಗಿದ್ದಾರೆ. . ಈ ಜೋಡಿ 2024 ರಿಂದ ರಿಲೇಷನ್‌ಶಿಪ್‌ನಲ್ಲಿದೆ ಎಂದು ವದಂತಿಗಳಿವೆ. ಇಷ್ಟು ದಿನಗಳ ಕಾಲ ಸಮಂತಾ ಹಾಗೂ ರಾಜ್ ನಿಡಿಮೋರು ಬಗ್ಗೆ ಗಾಸಿಪ್ ಕೇಳಿಬರುತ್ತಿತ್ತು. ಇಂದು (ಡಿ.1) ಮದುವೆ ಆಗುವ ಮೂಲಕ ಎಲ್ಲ ಅಂತೆ-ಕಂತೆಗಳಿಗೆ ಸಮಂತಾ ಮತ್ತು ರಾಜ್ ಪೂರ್ಣ ವಿರಾಮ ಇಟ್ಟಿದ್ದಾರೆ.

ಈ ಕುರಿತು ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, 01.12.2025 ಎಂದು ಬರೆದುಕೊಂಡಿದ್ದಾರೆ. ಇನ್ನೂ ಸಮಂತಾ ಪೋಸ್ಟ್‌ಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿದಂತೆ ಹಲವಾರು ಮಂದಿ ಶುಭಾಶಯ ಕೋರಿದ್ದಾರೆ.

ಇನ್ನು ಸಮಂತಾ ಖ್ಯಾತ ನಟ ನಾಗಚೈತನ್ಯ ಜೊತೆಗಿನ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ವೆಬ್‌ಸಿರೀಸ್‌ಗಳ ಮೂಲಕ ಪರಿಚಯವಾದ ಬಹುಕಾಲದ ಒಡನಾಡಿ ರಾಜ್ ಜೊತೆ ಸ್ಯಾಮ್ ಪ್ರೀತಿಯಲ್ಲಿ ಬಿದ್ದಿದ್ದು ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

Comments are closed.