Jagadish Shettar: ಜಗದೀಶ್ ಶೆಟ್ಟರ್ ಗೆ ಫೋನ್ ಮಾಡಿ ‘IPhone- 17 ಕೊಡಿಸಿ ಸರ್’ ಎಂದ ಯುವಕ !! ಯುವಕನ ಬೇಡಿಕೆ ಕೇಳಿ ಮಾಜಿ ಸಿಎಂ ಶಾಕ್

Jagadish Shettar: ಮಾಜಿ ಮುಖ್ಯಮಂತ್ರಿ, ಹಾಲಿ ಎಂಪಿ ಜಗದೀಶ್ ಶೆಟ್ಟರ್ ಅವರಿಗೆ ಯುವಕನೊಬ್ಬ ಫೋನ್ ಕರೆ ಮಾಡಿ ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ಬೇಕು ಎಂದು ವಿಚಿತ್ರ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಈ ಕುರಿತಾದ ಆಡಿಯೋ ಕೂಡ ವೈರಲಾಗುತ್ತಿದೆ.

ಹೌದು, ಜಗದೀಶ್ ಶೆಟ್ಟರ್ ಅವರಿಗೆ ಫೋನ್ ಮಾಡುವ ಯುವಕ ಮೊದಲು ತಾನು ಪ್ರತೀಕ್ ಮಿಲಜಿ ಎಂದು ಪರಿಚಯಿಸಿಕೊಂಡು, ಮೊದಲು ಶೆಟ್ಟರ್ ಅವರ ಯೋಗಕ್ಷೇಮ ವಿಚಾರಿಸಿದ್ದಾನೆ. ಬಳಿಕ “ಸರ್, ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು” ಎಂದು ಕೇಳಿದ್ದಾನೆ. ಅದಕ್ಕೆ “ಹೇಳಿ” ಎಂದು ಶೆಟ್ಟರ್ ಉತ್ತರಿಸಿದ್ದಾರೆ. ಆಗ ಯುವಕ, “ಸರ್, ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ರಿಲೀಸ್ ಆಗಿದೆ. ಅದೊಂದು ನನಗೆ ಬೇಕು” ಎಂದು ಕೇಳಿದ್ದಾನೆ.
ಆಗ ಕೊಂಚ ಗಲಿಬಿಲಿಕೊಂಡ ಜಗದೀಶ್ ಶೆಟ್ಟರ್ ಅವರು ‘ಏನಪ್ಪಾ ಎಂಪಿ ಹತ್ರ ಕಾಲ್ ಮಾಡಿ ಈ ರೀತಿ ಎಲ್ಲಾ ಹೆಲ್ಪ್ ಕೇಳುತ್ತೀರಲ್ಲ ಗೊತ್ತಾಗೋದಿಲ್ವಾ ನಿಮಗೆ’ ಎಂದು ಹೇಳಿ ಕರೆಯನ್ನು ಕಟ್ ಮಾಡುತ್ತಾರೆ. ನೀರು ಬರಲಿಲ್ಲ, ಕರೆಂಟ್ ಇಲ್ಲ, ಊರಿಗೆ ಬಸ್ ಬರಲ್ಲ, ಆಸ್ಪತ್ರೆ ಇಲ್ಲ, ಸ್ಕೂಲ್ ಇಲ್ಲ ಅಂತೆಲ್ಲ ಕಾಲ ದೂರು ಹೇಳುವ ಜನರು ಇದ್ದಾರೆ. ಆದರೆ ಈ ಯುವಕನ ವಿಚಿತ್ರ ಬೇಡಿಕೆಗೆ ಜಗದೀಶ್ ಶೆಟ್ಟರ್ ಕೊಂಚ ಗರಂ ಆಗಿದ್ದಾರೆ. ಎಂಪಿ ಬಳಿ ಇಂತಹವನ್ನೆಲ್ಲಾ ಕೇಳ್ತಿರಾ? ಅಂತ ಪೋನ್ ಕಟ್ ಮಾಡಿದ್ದಾರಂತೆ. ಸದ್ಯ ಸಂಸದ ಜಗದೀಶ್ ಶೆಟ್ಟರ್ಗೆ ಕಾಲ್ ಮಾಡಿ, ಐಫೋನ್ಗೆ ಯುವಕ ಬೇಡಿಕೆ ಇಟ್ಟಿರೋ ಆಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.
Comments are closed.