Holiday : ರಾಜ್ಯದ ಈ ಭಾಗದ ಶಾಲೆಗಳಿಗೆ ಇಂದು ರಜೆ ಘೋಷಣೆ ಸಾಧ್ಯತೆ!!

Holiday : ರಾಜ್ಯದಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೂ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಸಾಲು ಸಾಲು ರಜೆಗಳು ದೊರೆಯುತ್ತಿವೆ. ಅದರಲ್ಲೂ ಮಳೆಗಾಲದಂತೂ ಹಲವು ಭಾಗದ ಶಾಲೆಗಳಿಗೆ ನಿರಂತರವಾಗಿ ರಜೆ ದೊರೆತಿದೆ. ಈ ಬೆನ್ನಲ್ಲೇ ಇದೀಗ ಮತ್ತೆ ಹವಮಾನ ವೈಪರಿತ್ಯದಿಂದಾಗಿ ಇಂದು ಕೆಲವು ಭಾಗದ ಶಾಲೆಗಳಿಗೆ ರಜೆ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು, ದಿತ್ವಾ ಚಂಡಮಾರುತ ಹಿನ್ನೆಲೆ ಶೀತಗಾಳಿ ನಡುವೆಯೂ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ರಣಭೀಕರ ಮಳೆ ಮುಂದುವರೆದಿದೆ. ಈಗಾಗಲೇ ಭಾರೀ ಮಳೆ ಕಾರಣ ನವೆಂಬರ್ 29, 30ರಂದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗೆಯೇ ಡಿಸೆಂಬರ್ 1ರಂದು ಕೂಡ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ರಜೆ ಮುಂದುವರೆಸುವ ಸಾಧ್ಯತೆಯಿದೆ. ಹಾಗಂತ ಇದು ನಮ್ಮ ಕರ್ನಾಟಕದಲ್ಲಿ ಅಲ್ಲ. ಬದಲಿಗೆ ತಮಿಳುನಾಡಿನಲ್ಲಿ ರಜೆ ನೀಡಲಾಗುತ್ತಿದೆ.
ಡಿಸೆಂಬರ್ 1ರ ಸೋಮವಾರದಂದು ಕೂಡ ತಮಿಳುನಾಡಿನ ಚೆನ್ನೈ ಭಾಗದಲ್ಲಿ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಇದೆ. ಈ ಹಿನ್ನೆಲೆ ಅಂದು ಕೂಡ ತಮಿಳುನಾಡಿನ ವಿವಿಧ ಭಾಗಗಳಲ್ಲಿನ ಶಾಲೆಗಳಿಗೆ ರಜೆ ನೀಡುವ ಸಾಧ್ಯತೆಯಿದೆ. ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ. ಆದರೂ, ವಿದ್ಯಾರ್ಥಿಗಳು ಮತ್ತು ಪೋಷಕರು ಮುಂಚಿತವಾಗಿ ತಮ್ಮ ಶಾಲಾ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
Comments are closed.