Jammu kashmir: ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ನೆರೆಯ ಹಿಂದೂವಿನಿಂದ ನಿವೇಶನ ಗಿಫ್ಟ್!

Jammu kashmir: ಜಮ್ಮು ಮತ್ತು ಕಾಶ್ಮೀರ ಪತ್ರಕರ್ತ ಅರ್ಫಾಜ್ ಅಹ್ಮದ್ ಡೇಯಿಂಗ್ ಎಂಬಾತನ ಮನೆಯನ್ನು ಅಧಿಕಾರಿಗಳು ಗುರುವಾರ ನೆಲಸಮ ಮಾಡಿದ ಬೆನ್ನಲ್ಲೇ ಹಿಂದೂ ಕುಟುಂಬ ಒಂದು ಆತನ ಬೆನ್ನಿಗೆ ನಿಂತಿದೆ.

ಜಮ್ಮುವಿನ ಕುಲದೀಪ್ ಶರ್ಮಾ ಅವರು ಐದು ಮಾರ್ಲಾ (ಸುಮಾರು 3 ಸೆಂಟ್ಸ್ ) ನಿವೇಶನವನ್ನು ಅರ್ಫಾಜ್ ಡೇಯಿಂಗ್ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ ಹೃದಯಸ್ಪರ್ಶಿ ಘಟನೆ ನಡೆದಿದೆ.
ನೀಸ್ ಸೆಹರ್ ಇಂಡಿಯಾ ಎಂಬ ಡಿಜಿಟಲ್ ಸುದ್ದಿ ಪೋರ್ಟಲ್ ನಡೆಸುತ್ತಿರುವ ಡೇಯಿಂಗ್, ಇತ್ತೀಚೆಗೆ ಪ್ರಮುಖ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಂಕಿತ ಡ್ರಗ್ಸ್ ಕಳ್ಳ ಸಾಗಣೆದಾರರೊಂದಿಗೆ ಪೊಲೀಸ್ ಅಧಿಕಾರಿಯ ನಂಟು ಹೊಂದಿದ್ದಾರೆ ಎಂದು ವರದಿ ಮಾಡಿದ್ದರು. ಹೀಗಾಗಿ ತಮ್ಮ ಮನೆ ಧ್ವಂಸ ಮಾಡಲಾಗಿದೆ ಎಂದು ಪತ್ರಕರ್ತ ಹೇಳಿದ್ದಾರೆ. ಮನೆ ಧ್ವಂಸದಿಂದ ಡೇಯಿಂಗ್ ಅವರ ವೃದ್ಧ ಪೋಷಕರು, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ನಿರಾಶ್ರಿತರಾಗಿದ್ದಾರೆ.ಪತ್ರಕರ್ತನ ಕುಟುಂಬ ತಮಗೆ ಸಮಯ ನೀಡುವಂತೆ ಅಧಿಕಾರಿಗಳಲ್ಲಿ ಬೇಡಿಕೊಂಡರೂ ಕೊಡದಿದ್ದಾಗ, ಕೇಳದೆ ಅಧಿಕಾರಿಗಳು ಮನೆ ಧ್ವಂಸಗೊಳಿಸಿದ್ದಾರೆ. ಆಗ ಹಿಂದೂ ನೆರೆಹೊರೆಯವರು ಆತನ ಕುಟುಂಬಕ್ಕೆ ಸಹಾಯಕ್ಕೆ ಧಾವಿಸಿದ್ದಾರೆ. ಅರ್ಫಾಜ್‌ಗೆ 5 ಮರ್ಲಾ ಭೂಮಿಯನ್ನು ಉಡುಗೊರೆಯಾಗಿ ನೀಡಿ, ಕಂದಾಯ ಕಟ್ಟಿ ನೋಂದಣಿ ಕೂಡಾ ಮಾಡಿಸಿದ್ದಾರೆ.
Comments are closed.