ಉಡುಪಿ: ಪ್ರಧಾನಿ ಮೋದಿಗೆ ʼಭಾರತ ಭಾಗ್ಯವಿದಾತʼ ಬಿರುದು ನೀಡಿ ಸನ್ಮಾನ

ಉಡುಪಿ: ಶ್ರೀ ಕೃಷ್ಣನೂರು ಉಡುಪಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಪ್ರಧಾನಿ ಮೋದಿಯವರಿಗೆ ವಿಶೇಷ ಬಿರುದು ನೀಡಿ ಸನ್ಮಾನಿಸಲಾಯಿತು.

ಶ್ರೀ ಕೃಷ್ಣ ಮಠದ ಆವರಣದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿಯವರಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು, ʼಭಾರತ ಭಾಗ್ಯವಿದಾತʼ ಎಂಬ ವಿಶೇಷ ಬಿರುದು ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಇದೇ ವೇಳೆ ರಾಷ್ಟ್ರ, ರಕ್ಷಾ ಕವಚ, ಶ್ರೀ ಕೃಷ್ಣನ ಫೋಟೋಗಳನ್ನು ನೀಡಿ ಪ್ರಧಾನಿ ಅವರನ್ನು ಸನ್ಮಾನಿಸಲಾಯಿತು.
ನಂತರ ಪುತ್ತಿಗೆ ಶ್ರೀಗಳು ಕಾಶಿ ಕಾರಿಡಾರ್ ರೀತಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು. ಲಕ್ಷ ಕಂಠ ಗೀತಾ ಪಾರಾಯಣದ ಅಂಗನವಾಗಿ ಭಗವದ್ಗೀತೆಯ 18 ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು. ಹಾಗೂ ಮೋದಿ ಅವರು ಕೂಡಾ ಗೀತಾ ಪಾರಾಯಣ ಪಠಣ ಮಾಡಿದರು.
Comments are closed.