ಸಿಎಂ ಕುರ್ಚೀಲಿ ಬಂದು ಕುಳಿತ ಡಿಸಿಎಂ, ಮುಖ ಮುಖ ನೋಡಿಕೊಂಡ ಪ್ರೇಕ್ಷಕರು

Share the Article

ಬೆಂಗಳೂರು: ಕರ್ನಾಟಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಎಂ ಕೂತಿದ್ದ ಚೇರ್ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಕುಳಿತುಕೊಂಡ ಪ್ರಸಂಗ ನಡೆಯಿತು.

ವೇದಿಕೆಯಿಂದ ಸಿಎಂ ಸಿದ್ದರಾಮಯ್ಯ ಕೆಲ ಕಾಲ ಎದ್ದು ಹೊರ ಹೋಗಿದ್ದರು. ಈ ವೇಳೆ ಸಿಎಂ ಎದ್ದು ಹೋದ ಬಳಿಕ ಆ ಚೇರ್ ಮೇಲೆ ಕುಳಿತು ಡಿಸಿಎಂ ಡಿಕೆ ಶಿವಕುಮಾರ್ ಮಾರ್ಗರೇಟ್ ಆಳ್ವ ಜೊತೆಗೆ ಶಿವಕುಮಾರ್ ಕೆಲ ಸಮಾಲೋಚನೆ ನಡೆಸಿದರು ಸಿಎಂ ಸಿದ್ದರಾಮಯ್ಯ ಕುಳಿತಿದ್ದ ಕುರ್ಚಿಯಲ್ಲಿ ಅವರು ಒಂದು ನಿಮಿಷ ಚರ್ಚೆ ನಡೆಸಿದ್ದಾರೆ. ನಂತರ ತಮ್ಮ ಕುರ್ಚಿಗೆ ತೆರಳಿದ್ದಾರೆ. ಅದರ ಬೆನ್ನಲ್ಲೇ ಹೊರ ಹೋಗಿದ್ದ ಸಿಎಂ ಸಿದ್ದರಾಮಯ್ಯ ಮತ್ತೆ ಮರಳಿ ಕುರ್ಚಿಯಲ್ಲಿ ಆಸೀನರಾಗಿದ್ದಾರೆ. ಅಧಿಕಾರದ ಕುರ್ಚಿ ಹಿಡಿ ಬಿಡಿ ಕಣ್ಣಾಮುಚ್ಚಾಲೆ ಆತ ನಡೆಯುತ್ತಿರುವಾಗ ಈ ಘಟನೆ ಜನರನ್ನು ಸೆಳೆದಿದೆ.

Comments are closed.