Narendra modi: ಉಡುಪಿಗೆ ಆಗಮಿಸಿದ ಪ್ರಧಾನಿಗೆ ‘ಭಾರತ ಭಾಗ್ಯ ವಿಧಾತ’ ಬಿರುದು ನೀಡಿ ಸನ್ಮಾನ

Share the Article

Narendra modi:: ಕೃಷ್ಣನೂರು ಉಡುಪಿಯ (Udupi) ಶ್ರೀಕೃಷ್ಣ ಮಠದಲ್ಲಿ (Krishna Mutt) ಹಮ್ಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನಿಸಲಾಯಿತು.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಮೋದಿಯವರಿಗೆ ಬಿರುದು ನೀಡಿ ಸನ್ಮಾನಿಸಿದರು. ಇದೇ ವೇಳೆ ಅವರು, ಕಾಶಿ ಕಾರಿಡಾರ್ ರೀತಿಯಲ್ಲಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಪ್ರಧಾನಿ ಬಳಿ ಮನವಿ ಮಾಡಿದರು. ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು.

ಇದಕ್ಕೂ ಮುನ್ನ ಮೋದಿ ಅವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಪುತ್ತಿಗೆ ಶ್ರೀಗಳು ಕಂಕಣ ಕಟ್ಟಿದರು. ರಾಷ್ಟ್ರ ರಕ್ಷಣೆಯ ಉದ್ದೇಶದಿಂದ ಮೋದಿಗೆ ಶ್ರೀಗಳು ರಕ್ಷೆ ಕಟ್ಟಿದ್ದಾರೆ. ಬೆಳ್ಳಿಯ ಕಡಗೋಲು ಸಹಿತ ಉಡುಪಿ ಕೃಷ್ಣನ ಭಾವಚಿತ್ರ ಉಡುಗೊರೆಯಾಗಿ ನೀಡಿದರು. ಬಳಿಕ ಪೇಟ ತೊಡಿಸಿ ಉಡುಪಿ ಪುತ್ತಿಗೆ ಶ್ರೀ ಗಳಿಂದ ಗೌರವ ನೀಡಲಾಯಿತು.

Comments are closed.