PM Modi : ರಾಮ ಮಂದಿರದ ಧ್ವಜಾರೋಹಣದ ವೇಳೆ ಮೋದಿ ಕೈ ನಡುಗಿದ್ಯಾಕೆ? ಇಲ್ಲಿದೆ ನೋಡಿ ಅಸಲಿ ಸತ್ಯ

PM Modi : ಅಯೋಧ್ಯೆಯ ರಾಮಮಂದಿರದಲ್ಲಿ ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು, ದೇವಾಲಯದ ಮುಖ್ಯ ಗೋಪುರದ ಮೇಲೆ ಬೃಹತ್ ಧ್ವಜವನ್ನು ಆರೋಹಣ ಮಾಡಿದರು. ಈ ಸಂದರ್ಭದಲ್ಲಿ ಮೋದಿ ಅವರು ಧ್ವಜಕ್ಕೆ ಕೈಮುಗಿದು ವಂದಿಸುವ ವೇಳೆ ಅವರ ಕೈ ನಡುಗಿದ್ದು ದೇಶಾದ್ಯಂತ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದೀಗ ಮೋದಿಯ ಕೈ ನಡುಗಿದ್ಯಾಕೆ ಎಂಬುದಕ್ಕೆ ಅಸಲಿ ಕಾರಣ ತಿಳಿದು ಬಂದಿದೆ.

ಹೌದು, ಧ್ವಜಾರೋಹಣ ಪೂರ್ಣಗೊಳ್ಳುತ್ತಿದ್ದಂತೆ ನಮಸ್ಕರಿಸುತ್ತಿದ್ದ ಪ್ರಧಾನಿ ಮೋದಿಯವರ ಕೈಗಳು ನಡುಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಿಡಿಯೊ ಗಮನಿಸಿದ ಜನರು, ಮೋದಿಯವರಿಗೆ ಆರೋಗ್ಯ ಸಮಸ್ಯೆ ಎದುರಾಯಿತೇ? ಅವರ ಕೈಗಳು ಏಕೆ ನಡುಗುತ್ತಿವೆ? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೆಲವರು ಕೈ ನಡುಗಿರುವುದನ್ನು ಪಾರ್ಕಿನ್ಸನ್ ಅಥವಾ ವಯೋ ಸಹಜ ಸಮಸ್ಯೆ ಇರಬಹುದು ಎಂದು ಹೇಳಿದ್ದಾರೆ. ಆದರೆ ಕೈ ನಡುಗಿದ್ದಕ್ಕೆ ಅಸಲಿ ಕಾರಣ ಇಲ್ಲಿದೆ ನೋಡಿ.
ಅಸಲಿಗೆ ಮೋದಿಯವರಿಗೆ ಯಾವುದೇ ಆರೋಗ್ಯ ಸಂಬಂಧಿಸಿದ ಸಮಸ್ಯೆ ಇಲ್ಲ. ವಯೋ ಸಹಜ ಕಾಯಿಲೆಯೂ ಇಲ್ಲ. ಬದಲಾಗಿ ಅವರ ಕೈಗಳು ನಡುಗಿರುವುದು ಅತಿಯಾದ ಭಕ್ತಿಯಿಂದ ಮೈಮರೆತಿರುವುದಕ್ಕೆ. ಒಬ್ಬ ವ್ಯಕ್ತಿ ಅತಿಯಾದ ಭಕ್ತಿ, ಆನಂದ ಅಥವಾ ಭಾವನಾತ್ಮಕತೆಯ ಉತ್ತುಂಗ ತಲುಪಿದಾಗ ಮಾತು ಹೊರಡದೆ ದೇಹವು ತನ್ನ ನಿಯಂತ್ರಣ ಕಳೆದುಕೊಂಡು ಈ ರೀತಿ ಪ್ರತಿಕ್ರಿಯಿಸುತ್ತದೆ ಎಂದು ವೈದ್ಯರು ಪ್ರತಿಕ್ರಿಯೆ ನೀಡಿದ್ದಾರೆ.
Comments are closed.