ಮಣಿಪಾಲದ ಹೋಟೆಲ್ ನಲ್ಲಿ ಭಾರೀ ಸ್ಪೋಟ, 2 ಸಿಲಿಂಡರ್ ಸ್ಫೋಟಿದ ಶಂಕೆ, ಹೊರಕ್ಕೆ ಓಡಿ ಬಂದ ಜನ

ಮಣಿಪಾಲ: ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಹತ್ತಿರವಿರುವ ಡಾಬಾ ಒಂದರಲ್ಲಿ ಸ್ಪೋಟ ಸಂಭವಿಸಿದೆ. ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಇರುವ ಡೆಲ್ಲಿ ಡಾಬಾದಲ್ಲಿ ಸ್ಪೋಟ ಸಂಭವಿಸಿದ್ದು ಎರಡು ಗ್ಯಾಸ್ ಸಿಲಿಂಡರ್ ಗಳು ಒಂದರ ಹಿಂದೆ ಒಂದರಂತೆ ಸ್ಪೋಟಗೊಂಡಿವೆ.

ಮೊದಲು ಬೆಂಕಿ ಆವರಿಸಿದ್ದು ಅದರ ಬೆನ್ನಲ್ಲೇ ಸ್ಪೋಟ ಉತ್ಪತ್ತಿಯಾಗಿದೆ. ಸ್ಪೋಟದ ತೀವ್ರತೆಗೆ ಅಕ್ಕಪಕ್ಕದ ಬಹು ಮಹಡಿ ಕಟ್ಟಡಗಳಿಂದ ಜನರು ಓಡೋಡಿ ಹೊರಕ್ಕೆ ಬಂದು ಗಾಬರಿಯಿಂದ ನಿಂತದ್ದು ಕಂಡುಬಂತು.
ಪ್ರಧಾನಮಂತ್ರಿ ಮೋದಿಯವರು ನಾಳೆ ಉಡುಪಿಗೆ ಭೇಟಿಯಾಗುತ್ತಿದ್ದು, ಉಡುಪಿ ಮಣಿಪಾಲ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಈ ನಡುವೆ ಡಾಬಾ ದಲ್ಲಿ ಉಂಟಾದ ಸ್ಪೋಟ ಆತಂಕಕ್ಕೆ ಕಾರಣವಾಯಿತು. ಇದೀಗ ಅಲ್ಲಿ ಬೆಂಕಿ ನಂದಿಸುವಲ್ಲಿ ಸ್ಥಳೀಯ ಜನರು ಮತ್ತು ಅಗ್ನಿಶಾಮಕ ತಂಡ ಯಶಸ್ವಿಯಾಗಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ ಅಂಗಡಿಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ಯಾವುದೇ ಸಾವು ನೋವು ಆದ ಬಗ್ಗೆ ವರದಿಯಾಗಿಲ್ಲ.
Comments are closed.