ಕೇರಳ: 6 ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದ ಯವತಿ ಬೆಂಕಿ ಹಚ್ಚಿ ಸಾವು

Share the Article

ಕೇರಳದಲ್ಲಿ 20ರ ಹರೆಯದ ವಿವಾಹಿತ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಘಟನೆ ನಡೆದಿದೆ. ಪತಿಯ ಮನೆಯ ಹಿತ್ತಲಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಮಗಳ ಸಾವಿನ ಕುರಿತು ಗಂಡನ ಮನೆಯವರೇ ಕಾರಣ ಎಂದು ಆಕೆಯ ಪೋಷಕರು ಆರೋಪ ಮಾಡಿದ್ದಾರೆ.

ಬುಧವಾರ ಮಧ್ಯಾಹ್ನ ಅರ್ಚನಾಳ ಅತ್ತೆ ಮೊಮ್ಮಗನನ್ನು ಅಂಗನವಾಡಿಯಿಂದ ಕರೆದುಕೊಂಡು ಬರುವುದಕ್ಕಾಗಿ ಮನೆಯಿಂದ ಹೊರಟಿದ್ದು, ಮನೆಯ ಹಿಂಬದಿಯ ಕಾಂಕ್ರೀಟ್‌ ಶೆಡ್‌ನಲ್ಲಿ ಸೊಸೆ ಅರ್ಚನಾ ಕಂಡು ಬಂದಿದೆ. ಅರ್ಚನಾ ಅವರು ಆರು ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದು, ಶರೋನ್‌ ಎನ್ನುವವರನ್ನು ಮದುವೆಯಾಗಿದ್ದರು.

ಆದರೆ ಮದುವೆಯಾದಾಗಿನಿಂದ ಶರೋನ್‌ ದಿನವೂ ಆಕೆಯನ್ನು ದಿನವೂ ಥಳಿಸುತ್ತಿದ್ದ. ಅಲ್ಲದೇ ಮನೆಯ ಮನೆಯವರೊಂದಿಗೆ ಮಾತನಾಡುವುದಕ್ಕೂ ಆತ ಬಿಡುತ್ತಿರಲಿಲ್ಲ. ಅವಳಿಗೆ ಒಂದು ದಿನ ಕಾಲೇಜಿನ ಹೊರಗೆಯೇ ಸರಿಯಾಗಿ ಹೊಡೆದಿದ್ದ. ಪೋಷಕರು ಫೋನ್‌ ಮೂಲಕ ಸಂಪರ್ಕ ಮಾಡಲು ನಿರ್ಬಂಧ ವಿಧಿಸಿದ್ದ. ಈ ಕುರಿತು ಅರ್ಚನಾಳ ತಂದೆ ಹರಿದಾಸ್‌ ಹೇಳಿದ್ದಾರೆ.

ಅರ್ಚನಾಳ ಸೋದರಿ ಕೂಡಾ ಈ ಕುರಿತು ಮಾತನಾಡಿದ್ದು, ಬಿಟೆಕ್‌ ಮಾಡಿದ್ದ ಅಕ್ಕ, ವಿದೇಶದಲ್ಲಿ ನೆಲೆಸಬೇಕು ಎಂದು ಕನಸು ಕಂಡಿದ್ದಳು. ಆಕೆ ವಿದೇಶಕ್ಕೆ ಹೋಗುವುದನ್ನು ಶರೋನ್‌ ತಡೆದಿದ್ದ.

ಇದೀಗ ಶರೋನ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಆತ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಶರೋನ್‌ ಮತ್ತು ಆತನ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಜೊತೆಗೆ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಅರ್ಚನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Comments are closed.