ಗೋವು ಸಾಗಿಸುತ್ತಿದ್ದ ಲಾರಿ ತಡೆದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ

Share the Article

ಕಲಬುರಗಿ: ಗೋವುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದು ಪರಿಶೀಲನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಕಲಬುರಗಿ ನಗರದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ಕಲಬುರಗಿ ನಗರದ ರಿಂಗ್‌ ರಸ್ತೆಯ ರಾಮನಗರದ ಬಳಿ ಈ ಗಟನೆ ನಡೆದಿದೆ.

ಅಫಜಲಪುರದಿಂದ ಆಳಂದ ಕಡೆಗೆ ಹೋಗುತ್ತಿದ್ದ ಗೋವುಗಳನ್ನು ತೆಗೆದುಕೊಂಡು ಹೋಗಿದ್ದ ಲಾರಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರಾದ ರೋಹಿತ್‌ ಮತ್ತು ಅನಿಲ್‌ ನಿಲ್ಲಿಸಿ, ಲಾರಿ ಪರಿಶೀಲನೆ ಮಾಡಲು ಮುಂದಾದಾಗ ಚಾಲಕನ ಜೊತೆಗೆ ಗಲಾಟೆ ನಡೆದಿದೆ.

ಗೋವು ಸಾಗಾಟವನ್ನು ಲಾರಿ ಚಾಲಕ ದಾಖಲಾತಿ ಜೊತೆಗೆ ಅನುಮತಿ ಪಡೆದೇ ಗೋವು ಸಾಗಾಟ ಮಾಡುತ್ತಿರುವುದಾಗಿ ಹೇಳಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರಾದ ರೋಹಿತ್‌, ಅನಿಲ್‌ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಜನರೆಲ್ಲ ಸೇರಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಲಬುರಗಿ ಸಬ್‌ ಅರ್ಬನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Comments are closed.