ಹೈಕೋರ್ಟ್ ನ್ಯಾ. ಎಂ.ನಾಗಪ್ರಸನ್ನ ದಾಖಲೆ: 6 ವರ್ಷಗಳಲ್ಲಿ, 22,000 ತೀರ್ಪು, ದೇಶದಲ್ಲೇ ಪ್ರಥಮ

Share the Article

ಬೆಂಗಳೂರು: ಕರ್ನಾಟಕ ಅವರು ಆರು ವರ್ಷಗಳ ಅವಧಿಯಲ್ಲಿ 22,000 ವಿವಿಧ ಪ್ರಕರಣಗಳನ್ನು ವಿಲೇವಾರಿ ಮಾಡಿರುವ ದೇಶದಲ್ಲೇ ಮೊದಲ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
ನ್ಯಾ.ನಾಗಪ್ರಸನ್ನ ಅವರು ಬುಧವಾರಕ್ಕೆ, ನವೆಂಬರ್ 26ಕ್ಕೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ 6 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಈ ದಾಖಲೆ ತೀರ್ಪು ನೀಡಿದ ಕರ್ನಾಟಕದ ಪ್ರಥಮ ಹೈಕೋರ್ಟ್‌ ನ್ಯಾಯಾಧೀಶರು ಎನಿಸಿದ್ದಾರೆ.

22 ಸಾವಿರ ತೀರ್ಪುಗಳಲ್ಲಿ 985 ಸೂಚಿತ (ಅಂದರೆ ರಿಪೋರ್ಟೆಡ್) ತೀರ್ಪುಗಳಾಗಿ ದಾಖಲಾಗಿವೆ.
ನ್ಯಾ. ಎಂ.ನಾಗಪ್ರಸನ್ನ ಅವರ ಹೆಸರು ಹೆಚ್ಚಿನ ಸಂದರ್ಭಗಳಲ್ಲಿ ಸುದ್ದಿ ಮಾಧ್ಯಮದಲ್ಲಿ ತೀರ್ಪು ಪ್ರಕಟಿಸುವ ಸಂದರ್ಭ.ನಾವು ಕೇಳುತ್ತಲೇ ಇದ್ದೇವೆ. ಅವರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2019ರ ನವೆಂಬ‌ರ್ 26ರಂದು ಪ್ರಮಾಣ ವಚನ ಸ್ವೀಕರಿಸಿದ್ದು, ನ್ಯಾ.ನಾಗಪ್ರಸನ್ನ ಅವರ ಅವಧಿ 2033ರವರೆಗೂ ಇದೆ. ಹಾಗಾಗಿ ಇನ್ನೂ ಸಾವಿರಾರು ತೀರ್ಪನ್ನು ಅವರು ತ್ವರಿತವಾಗಿ ನೀಡಲಿದ್ದಾರೆ.

Comments are closed.