Viral Video : ನೀರಿನ ಪೈಪರ್ ರಿಪೇರಿ ಮಾಡುವಾಗ ಹೆಬ್ಬಾವು ದಾಳಿ – ಕೆಲ ನಿಮಿಷಗಳಲ್ಲಿ ಆಗಿದ್ದೇನು?

Share the Article

Viral Video : ವಾಟರ್ ಮ್ಯಾನ್ ಒಬ್ಬ ನೀರಿನ ಪೈಪ್ ರಿಪೇರಿ ಮಾಡುವಾಗ ಹೆಬ್ಬಾವು ದಾಳಿ ಮಾಡಿದ್ದು, ಕೆಲ ನಿಮಿಷಗಳ ಕಾಲ ಒದ್ದಾಡಿ ಬಚಾವಾದ ಘಟನೆ ನಡೆದಿದೆ.

ಹೌದು, ನವೆಂಬರ್ 24ರಂದು (ಸೋಮವಾರ) ನಂದ್ ಸಿಂಗ್ ಎಂಬುವವರು ಉಷ್ಣ ವಿದ್ಯುತ್​​​ ಸ್ಥಾವರದಲ್ಲಿ ನೀರಿನ ಪೈಪ್‌ಲೈನ್ ಪರಿಶೀಲಿಸುತ್ತಿದ್ದ ವೇಳೆ, ಹತ್ತಿರದಲ್ಲಿ ಕುಳಿತಿದ್ದ ಹೆಬ್ಬಾವೊಂದು ದಾಳಿ ಮಾಡಿದೆ. ನಂದ್ ಸಿಂಗ್ ಅವರ ಕಾಲುಗಳಿಗೆ ಹೆಬ್ಬಾವು ಸುತ್ತಿಕೊಂಡಿದ್ದು, ಸುಮಾರು 10 ನಿಮಿಷಗಳ ಕಾಲ ಅದರಿಂದ ಬಿಡಿಸಿಕೊಳ್ಳಲು ಒದ್ದಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ಇನ್ಸ್ಟಾಗ್ರಾಮ್​​ನಲ್ಲಿ ವೈರಲ್​​ ಆಗಿದೆ.

ಸಿಂಗ್ ಒದ್ದಾಡುತ್ತಿರುವುದನ್ನು ನೋಡಿ, ಸಹೋದ್ಯೋಗಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಹೆಬ್ಬಾವಿನಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ಇದೀಗ ಈ ವಿಡಿಯೋ @kotacityraj ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಇದು ತುಂಬಾ ಭಯಾನಕವಾಗಿದೆ ಎಂದು ಕಮೆಂಟ್​ ಮಾಡಿದ್ದಾರೆ.

View this post on Instagram

A post shared by Kota कोटा (@kotacityraj)

Comments are closed.