BBK-12 : ‘ಎಲ್ಲಾ ಶೋಗಳಲ್ಲೂ ಒಂದೊಂದು ಹುಡುಗಿ ಬಲಿಕೊಟ್ಟು ಗೆಲ್ಲೋ ಗಿಲ್ಲಿ’ – ಸ್ಟೋರಿ ಹಾಕಿ ಗಿಲ್ಲಿ ನಟನ ವಿರುದ್ಧ ಉಗ್ರಂ ಮಂಜು ಬಾವಿ ಪತ್ನಿ ಆಕ್ರೋಶ

Share the Article

BBK-12: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಗಿಲ್ಲಿ ನಟ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ತಮ್ಮ ಹಾಸ್ಯದ ಮಾತುಗಳಿಂದಲೇ ಇನ್ನೊಬ್ಬರ ಕಾಲು ಎಳೆಯುತ್ತಾ, ನೋಡುಗರಿಗೆ ಮಜಾ ನೀಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು ಮತ್ತು ರಜತ್ ಅವರು ಬಿಗ್ ಬಾಸ್ ಮನೆಯೊಳಗೆ ತೆರಳಿದ್ದು ಗಿಲ್ಲಿ ವಿರುದ್ಧ ಸಿಡಿದೆದಿದ್ದರು. ಬೇಗ ವಿಕ್ರಮಂಗಿ ಅವರ ಬಾವಿಪತ್ನಿ ಗಿಲ್ಲಿ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇನ್ಸ್ಟಾ ಸ್ಟೇಟಸ್ ಹಾಕಿದ್ದಾರೆ.

ಹೌದು, ಇಂದಿನ ಬಿಗ್ ಬಾಸ್ ಪ್ರಮೋದಲ್ಲಿ ಉಗ್ರಂ ಮಂಜು ಮತ್ತು ರಜತ್ ಅವರು ಗಿಲ್ಲಿ ವಿರುದ್ಧ ತೊಡೆತಟ್ಟಿರುವುದನ್ನು ಕಾಣಬಹುದು. ಅಂದಹಾಗೆ ಪ್ರೋಮೊದಲ್ಲಿ ಮನೆಯೊಳಗೆ ಬಂದಿರುವ ಅತಿಥಿಗಳು ಯಾರು ಅನ್ನೋದು ರಿವೀಲ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಿಂಚಿದ್ದ ಉಗ್ರಂ ಮಂಜು, ರಜತ್ ಕಿಶನ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಆಗಮಿಸಿದ್ದಾರೆ.

ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವ ಬಿಗ್ ಬಾಸ್,
ಉಗ್ರಂ ಮಂಜು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ಅನೌನ್ಸ್ ಮಾಡುತ್ತಾರೆ. “ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.” ಎಂದು ಅನೌನ್ಸ್ ಮಾಡುತ್ತಿದ್ದಂತೆ ಗಿಲ್ಲಿ ನಟ “ಎರಡನೆಯದ್ದಾ.. ಮೂರನೆಯದ್ದಾ?” ಎಂದು ಪ್ರಶ್ನೆ ಮಾಡುತ್ತಾರೆ. ಗಿಲ್ಲಿಯ ಈ ಮಾತು ಉಗ್ರಂ ಮಂಜುರನ್ನು ಕೆರಳಿಸಿದೆ. “ಪರ್ಸನಲ್ ಅಂತ ಬಂದು ಬಿಟ್ಟರೆ, ಸಪ್ಲೇಯರೂ ಅಲ್ಲ. ನಾನು ಅತಿಥಿನೂ ಅಲ್ಲ. ಬೇರೆನೇ ಆಗುತ್ತೆ” ಎಂದು ಉಗ್ರಂ ಮಂಜು ಕೋಪದಲ್ಲಿ ಹೇಳಿದ್ದಾರೆ. ಇದನ್ನೆಲ್ಲಾ ಗಮನಿಸಿದ ಉಗ್ರಂ ಮಂಜು ಭಾವಿ ಪತ್ನಿ ಸಂಧ್ಯಾ ತಮ್ಮ ಬೇಸರವನ್ನ ಸೋಷಿಯಲ್ ಮೀಡಿಯಾ ಮೂಲಕ ಹೊರಹಾಕಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಉಗ್ರಂ ಮಂಜು ಭಾವಿ ಪತ್ನಿ ಸಂಧ್ಯಾ ಸ್ಟೋರಿಯೊಂದನ್ನ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ಸ್ಟೋರಿಯಲ್ಲೇನಿದೆ?
”ಎಲ್ಲರ ಹತ್ತಿರ ಪರ್ಸನಲ್ ವಿಷಯಗಳನ್ನ ಇಟ್ಟುಕೊಂಡು ಕೆಟ್ಟ ಜೋಕ್ಸ್ ಮಾಡೋದು ಕಾಮಿಡಿನಾ? ಎಲ್ಲಾ ಶೋಗಳಲ್ಲೂ ಒಂದೊಂದು ಹುಡುಗಿ ಬಲಿಕೊಟ್ಟು ಗೆಲ್ಲೋ ಗಿಲ್ಲಿ, ಬೇರೆ ಅವರಿಗೆ ಎಷ್ಟನೆಯದ್ದು ಅಂತ ಕೇಳ್ತಿದ್ದಾನಾ? ಬಿಟ್ಟಿ ಊಟ ಕೊಡೋ ಅಂಥ ಯೋಗ್ಯತೆ ಇದ್ಯಾ ನಿನಗೆ ಗಿಲ್ಲಿ? ನಿನಗೇ ಬಿಟ್ಟಿ ಊಟ ಹಾಕ್ತಿರೋದು ‘ಬಿಗ್ ಬಾಸ್’ ಮತ್ತು ಕಲರ್ಸ್ ಕನ್ನಡ ಅನ್ನೋದು ನೆನಪಿರಲಿ” ಎಂದು ಅಖಿಲ್ ಅಜ್ಜರ್ ಎಂಬುವರು ಇನ್ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿದ್ದರು. ಅದನ್ನೇ ಉಗ್ರಂ ಮಂಜು ಅವರ ಭಾವಿ ಪತ್ನಿ ಸಂಧ್ಯಾ ಖುಷಿ ಶೇರ್‌ ಮಾಡಿದ್ದಾರೆ.

ಇಷ್ಟು ಮಾತ್ರವಲ್ಲದೆ ”ಗಿಲ್ಲಿ ಮಾಡಿದ್ದು ತಪ್ಪು ಅನ್ಸುತ್ತೆ” ಎಂದು ಟೆಕ್ಸ್ಟ್‌ ಹೊಂದಿರುವ ವಿಡಿಯೋವನ್ನೂ ಉಗ್ರಂ ಮಂಜು ಭಾವಿ ಪತ್ನಿ ಸಂಧ್ಯಾ ಖುಷಿ ಹಂಚಿಕೊಂಡಿದ್ದಾರೆ.

Comments are closed.