ಬಹುಪತ್ನಿತ್ವ ನಿಷೇಧ ಮಸೂದೆ ಮಂಡಿಸಿದ ಸಿಎಂ

Share the Article

ಗುವಾಹಟಿ: ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ ಮಂಡಿಸಿದ್ದಾರೆ. ವಿಪಕ್ಷ ಕಾಂಗ್ರೆಸ್, ಸಿಪಿಎಂ ಹಾಗೂ ರಾಯ್‌ಜೋರ್ ದಳದ ಶಾಸಕರ ಅನುಪಸ್ಥಿತಿ ಮಧ್ಯೆಯೇ ಈ ಮಸೂದೆ ಮಂಡಿಸಿದ್ದಾರೆ ಸಿಎಂ. ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಮಂಗಳವಾರ ಅಧಿವೇಶನದ ಮೊದಲ ದಿನವೇ ಮಸೂದೆ ಮಂಡಿಸಿದ್ದು, ಮಸೂದೆಯ ಮೇಲಿನ ಚರ್ಚೆ ಬಳಿಕ ಅದಕ್ಕೆ ಅಂಗೀಕಾರ ದೊರೆಯಲಿದೆ.

ಬಹುಪತ್ನಿತ್ವ ಅಪರಾಧ, ಗರಿಷ್ಟ ಶಿಕ್ಷೆ
ಬಹುಪತ್ನಿತ್ವ ಅಪರಾಧವಾಗಿದ್ದು, ಯಾವುದೇ ಧರ್ಮದ ವ್ಯಕ್ತಿ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಇನ್ನೊಂದು ಮದುವೆಯಾದರೆ 7 ವರ್ಷ ಶಿಕ್ಷೆ ವಿಧಿಸುವ ಅಧಿಕಾರವನ್ನು ಈ ಕಾಯ್ದೆ ಮೂಲಕ ನೀಡಲಾಗಿದೆ. ಈಗಾಗಲೇ ಈ ಕಾಯ್ದೆಗೆ ವಿರೋಧ ವ್ಯಕ್ತವಾಗಿದ್ದು ಮಸೂದೆ ಚರ್ಚೆಯ ನಂತರ ಕಾಯ್ದೆ ಜಾರಿ ಆಗುತ್ತಾ ಅನ್ನುವ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ.

Comments are closed.