ಡಿಕೆಶಿ ಬಾಹ್ಯ ಬೆಂಬಲ ನೀಡಿದರೆ ನಾವು ಸರಕಾರ ರಚನೆ ಮಾಡ್ತೀವಿ: ಸದಾನಂದ ಗೌಡ

Share the Article

ತುಮಕೂರು: ಕಾಂಗ್ರೆಸ್‌ ಧೋರಣೆಯಿಂದ ಬೇಸತ್ತು ಡಿಕೆಶಿ ನಮಗೆ ಬಾಹ್ಯ ಬೆಂಬಲ ನೀಡಿದರೆ ನಾವು ಸರಕಾರ ರಚನೆ ಮಾಡಲು ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಸದಾನಂದ ಗೌಡ ಅವರು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.

ಡಿಕೆಶಿ ಬಾಹ್ಯ ಬೆಂಬಲದೊಂದಿಗೆ ನಮ್ಮವರು ಸಿಎಂ ಆಗಲು ನಮ್ಮ ಅಭ್ಯಂತರ ಇಲ್ಲ. ಆದರೆ ನಮ್ಮ ಬೆಂಬಲದೊಂದಿಗೆ ಡಿಕೆಶಿ ಸಿಎಂ ಆಗಬಹುದಾ ಅನ್ನೋದನ್ನು ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ. ಕರ್ನಾಟಕದಲ್ಲಿ ಸದ್ಯಕ್ಕೆ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿಯತ್ತ ಜನರ ಒಲವಿದೆ. ಈ ಸಂದರ್ಭದಲ್ಲಿ ಹೈಕಮಾಂಡ್‌ ಡಿಕೆಶಿಗೆ ಸಪೋರ್ಟ್‌ ಮಾಡುವ ತಪ್ಪುವ ನಿರ್ಧಾರ ಕೈಗೊಳ್ಳಲ್ಲ ಅನ್ನುವ ನಂಬಿಕೆ ಎಂದು ಹೇಳಿರುವ ಕುರಿತು ವರದಿಯಾಗಿದೆ.

ಡಿಕೆಶಿ ಬಳಿ 70 ಜನ ಶಾಸಕರ ಬೆಂಬಲ ಇದ್ರೆ ಅವರ ಹೈಕಮಾಂಡೇ ಅವರನ್ನು ಸಿಎಂ ಮಾಡುತಿತ್ತು ಅಲ್ಲವೇ? ರಾಜ್ಯದಲ್ಲಿ ಪರ್ಯಾಯ ವ್ಯವಸ್ಥೆ ಕುರಿತು ಕೇಂದ್ರ ಸಚಿವ ವಿ ಸೋಮಣ್ಣ ಕೊಟ್ಟಿರುವ ಹೇಳಿಕೆ ಸತ್ಯವಾಗಿರಬಹುದು. ಆದಾಗ್ಯೂ ಮಧ್ಯಂತರ ಚುನಾವಣೆ ಆಗೋದನ್ನು ನಾನು ವಿರೋಧಿಸುತ್ತೇನೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಪಬ್ಲಿಕ್‌ ಟಿವಿ ವರದಿ ಮಾಡಿದೆ.

Comments are closed.