CRIME: ದೇವರಿಗೆ ಬಿಟ್ಟ ಹಸುವಿನ ಕಾಲು ಕಡಿದ ಪಾಪಿಗಳು!

CRIME: ಕೊಪ್ಪಳ (Koppal) ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾಟರಂಗಿ ಗ್ರಾಮದಲ್ಲಿ ಘೋರ ಕೃತ್ಯವೊಂದು (Crime) ನಡೆದಿದ್ದು, ದೇವರಿಗೆ ಎಂದು ಬಿಟ್ಟಿದ್ದ ಹಸುವಿನ (Attack On Cow) ದುಷ್ಕರ್ಮಿಗಳು ಕೊಡಲಿಯಿಂದ ಕಡಿದಿರುವ ಘಟನೆ ನಡೆದಿದೆ.

ಹತ್ತು ವರ್ಷದ ಹಿಂದೆ ಮಾಟರಂಗಿ ಗ್ರಾಮದ ಮಾರುತೇಶ್ವರ ದೇವರಿಗೆಂದು ಈ ಹಸುವನ್ನು ಬಿಡಲಾಗಿತ್ತು. ಹೀಗಾಗಿ ಇಡೀ ಗ್ರಾಮದ ಜನ ಇದನ್ನೂ ದೈವದ ರೂಪದಲ್ಲಿ ಪ್ರತಿನಿತ್ಯ ಪೂಜಿಸುತ್ತಿದ್ದರು. ಆದರೆ ಭಾನುವಾರ ಯಾರೋ ದುಷ್ಕರ್ಮಿಗಳು ಹಸುವಿನ ಮೇಲೆ ಹಲ್ಲೆ ನಡೆಸಿದ್ದಾರೆ.
ಮಾಟರಂಗಿ ಗ್ರಾಮದ ಪಕ್ಕದಲ್ಲಿರುವ ಲಿಂಗನಬಂಡಿ ರಮೇಶ್ ಎನ್ನುವವರ ಜಮೀನಿನಲ್ಲಿ ಹಸು ಮೇಯಲು ಹೋಗಿತ್ತು. ಈ ಸಂದರ್ಭದಲ್ಲಿ ಕೊಡಲಿಯಿಂದ ಗೋವಿನ ಕಾಲನ್ನು ಕಡಿಯಲಾಗಿದೆ. ಸ್ಥಳೀಯರು ಹೇಳುವಂತೆ ರಮೇಶ್ ಅವರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯರು ವ್ಯಾಪಕ ಆಕ್ರೋಶ ಹೊರಹಾಕಿದ್ದು, ಈ ಕೂಡಲೇ ಆರೋಪಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Comments are closed.