Mysore : ಡಿಕೆಶಿ ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಆಗ್ಲೇಬೇಕು, ಇಲ್ಲಾಂದ್ರೆ.. – ಖ್ಯಾತ ಸ್ವಾಮೀಜಿ ಸ್ಫೋಟಕ ಭವಿಷ್ಯ

Share the Article

Mysore : ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದರ ನಡುವೆ ಡಿಕೆ ಶಿವಕುಮಾರ್ ಅವರು ನಾನಾ ದೇವರುಗಳಿಗೆ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದಾರೆ. ಈ ಬೆನ್ನಲ್ಲೇ ಖ್ಯಾತ ಸ್ವಾಮೀಜಿ ಒಬ್ಬರು ‘ಡಿಕೆ ಶಿವಕುಮಾರ್ ಅವರು ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಆಗಲೇಬೇಕು, ಇಲ್ಲಾಂದ್ರೆ ಅವರು ಜನ್ಮದಲ್ಲಿ ಮುಖ್ಯಮಂತ್ರಿ ಆಗಲ್ಲ’ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಹೌದು, ಡಿಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಮೈಸೂರಿನಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದ ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯಲಕ್ಷ್ಮಿ ಪೀಠ ಪ್ರಾಪ್ತ್ಯರ್ಥ ಸಂಕಲ್ಪ ಪೂಜೆ ನೆರನೇರಿಕೆ ಮಾಡಲಾಗಿದೆ. ಹುಡ್ಕೋ ಬಡಾವಣೆಯ ನವಗ್ರಹ ಸಹಿತ ಬಲಮುರಿ‌ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗಿದೆ. ಗಣಪತಿ ಹಾಗೂ ಲಲಿತಾ ತ್ರಿಪುರಸುಂದರಿ ದೇವಿಗೆ ಪೂಜೆ ಮಾಡಲಾಗಿದೆ. ಪೂಜೆ ಮೂಲಕ ಮುಖ್ಯಮಂತ್ರಿ ಪದವಿ ಪ್ರಾಪ್ತಿಗೆ ಸಂಕಲ್ಪ ಮಾಡಿಕೊಳ್ಳಲಾಗಿದೆ.

ಇನ್ನು ಎರಡು ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಅದಕ್ಕಾಗಿ ಸಂಕಲ್ಪ ಪೂಜೆ ಮಾಡಿದ್ದೇವೆ. ದೇವಿ ಕೂಡ ಬಲಗಡೆಯಿಂದ ಹೂ ವರ ಕೊಟ್ಟು ಆಶಿರ್ವಾದ ಮಾಡಿದ್ದಾಳೆ. ಡಿ.ಕೆ.ಶಿವಕುಮಾರ್ ಖಂಡಿತ ಮುಖ್ಯಮಂತ್ರಿ ಆಗುತ್ತಾರೆ. ಇದು ನೂರಕ್ಕೆ ಸಾವಿರ ಪಟ್ಟು ಆಗುತ್ತೆ‌. ಯಾರು ಏನೇ ಮಾಡಿದರೂ ದೈವ ಸಂಕಲ್ಪದ ಮುಂದೆ ಯಾವುದೂ ನಡೆಯೋದಿಲ್ಲ. ಒಂದು ವೇಳೆ ಈಗ CM ಆಗಲಿಲ್ಲ ಎಂದರೆ ಜನ್ಮದಲ್ಲಿ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Comments are closed.