BBK-12 : ಬಿಗ್ ಬಾಸ್ ಮನೆಗೆ ತೆರಳಿ ಗಿಲ್ಲಿ ವಿರುದ್ಧ ಸಿಡಿದೆದ್ದ ಉಗ್ರಂ ಮಂಜು, ರಜತ್ – ಗಿಲ್ಲಿ ಮಾಡಿದ ತಪ್ಪೇನು?

BBK -12: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಗಿಲ್ಲಿ ನಟ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ತಮ್ಮ ಹಾಸ್ಯದ ಮಾತುಗಳಿಂದಲೇ ಇನ್ನೊಬ್ಬರ ಕಾಲು ಎಳೆಯುತ್ತಾ, ನೋಡುಗರಿಗೆ ಮಜಾ ನೀಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮಂಜಿ ಸ್ಪರ್ಧಿಗಳಾದ ಉಗ್ರಂ ಮಂಜು ಮತ್ತು ರಜತ್ ಅವರು ಬಿಗ್ ಬಾಸ್ ಮನೆಯೊಳಗೆ ತೆರಳಿದ್ದು ಗಿಲ್ಲಿ ವಿರುದ್ಧ ಸಿಡಿದೆದಿದ್ದಾರೆ.

ಹೌದು, ಇಂದಿನ ಬಿಗ್ ಬಾಸ್ ಪ್ರಮೋದಲ್ಲಿ ಉಗ್ರಂ ಮಂಜು ಮತ್ತು ರಜತ್ ಅವರು ಗಿಲ್ಲಿ ವಿರುದ್ಧ ತೊಡೆತಟ್ಟಿರುವುದನ್ನು ಕಾಣಬಹುದು. ಅಂದಹಾಗೆ ಪ್ರೋಮೊದಲ್ಲಿ ಮನೆಯೊಳಗೆ ಬಂದಿರುವ ಅತಿಥಿಗಳು ಯಾರು ಅನ್ನೋದು ರಿವೀಲ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಿಂಚಿದ್ದ ಉಗ್ರಂ ಮಂಜು, ರಜತ್ ಕಿಶನ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಬಿಗ್ ಬಾಸ್ ಮನೆಗೆ ಅತಿಥಿಗಳಾಗಿ ಆಗಮಿಸಿದ್ದಾರೆ.
A post shared by Colors Kannada Official (@colorskannadaofficial)
ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವ ಬಿಗ್ ಬಾಸ್,
ಉಗ್ರಂ ಮಂಜು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ಅನೌನ್ಸ್ ಮಾಡುತ್ತಾರೆ. “ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.” ಎಂದು ಅನೌನ್ಸ್ ಮಾಡುತ್ತಿದ್ದಂತೆ ಗಿಲ್ಲಿ ನಟ “ಎರಡನೆಯದ್ದಾ.. ಮೂರನೆಯದ್ದಾ?” ಎಂದು ಪ್ರಶ್ನೆ ಮಾಡುತ್ತಾರೆ. ಗಿಲ್ಲಿಯ ಈ ಮಾತು ಉಗ್ರಂ ಮಂಜುರನ್ನು ಕೆರಳಿಸಿದೆ. “ಪರ್ಸನಲ್ ಅಂತ ಬಂದು ಬಿಟ್ಟರೆ, ಸಪ್ಲೇಯರೂ ಅಲ್ಲ. ನಾನು ಅತಿಥಿನೂ ಅಲ್ಲ. ಬೇರೆನೇ ಆಗುತ್ತೆ” ಎಂದು ಉಗ್ರಂ ಮಂಜು ಕೋಪದಲ್ಲಿ ಹೇಳಿದ್ದಾರೆ.
ಇನ್ನೊಂದು ಸಂದರ್ಭದಲ್ಲಿ ಮೋಕ್ಷಿತಾ ಪೈ ಬಿಗ್ ಬಾಸ್ ಮನೆಗೆ ಉಗ್ರಂ ಮಂಜು ಅವರ ಬ್ಯಾಚುಲರೇಟ್ ಪಾರ್ಟಿ ಮಾಡುವುದಕ್ಕೆ ಬಂದಿದ್ದೇವೆ ಎನ್ನುತ್ತಾರೆ. ಆಗ ಗಿಲ್ಲಿ ಬಿಟ್ಟಿ ಊಟ ಮಾಡಿಕೊಂಡು ಹೋಗುವುದಕ್ಕೆ ಬಂದಿದ್ದೀರಾ? ಎನ್ನುತ್ತಾರೆ. ಈ ಮಾತಿಗೆ ರಜತ್ ಕೆಂಡ ಕಾರಿದ್ದಾರೆ. “ನೀನು ಕೊಡ್ತಾ ಇದ್ದೀಯನಪ್ಪ ಬಿಟ್ಟು ಊಟ. ಮಾತುಗಳು ಕರೆಕ್ಟ್ ಆಗಿ ಬರಲಿ. ಎಲ್ಲರ ಹತ್ತಿರ ಮಾತಾಡುವಂತೆ ನನ್ನ ಹತ್ತಿರ ಮಾತಾಡುವುದಕ್ಕೆ ಬರಬೇಡ. ಎಷ್ಟರಲ್ಲಿ ಇರಬೇಕು. ಅಷ್ಟರಲ್ಲಿ ಇರಬೇಕು” ಅಂತ ರಜತ್ ಅವಾಜ್ ಹಾಕಿದ್ದಾರೆ. ಉಗ್ರಂ ಮಂಜು, ರಜತ್ ಸೇರಿದಂತೆ ಮನೆಯವರೊಂದಿಗೆ ಗಿಲ್ಲಿ ನಡೆದುಕೊಂಡ ರೀತಿಗೆ ಕೆಲ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
Comments are closed.