Bank Holidays: ಡಿಸೆಂಬರ್ ತಿಂಗಳಲ್ಲಿ ವಿವಿಧೆಡೆ 18 ದಿನ ಬ್ಯಾಂಕ್ ರಜೆ

Share the Article

Bank holidays: ಆರ್​ಬಿಐ ಕ್ಯಾಲೆಂಡರ್ ಪ್ರಕಾರ 2025ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 18 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಹಬ್ಬಗಳ ಸೀಸನ್ ಮುಗಿದಿದ್ದರೂ ವರ್ಷಾಂತ್ಯದ ತಿಂಗಳಾದ ಡಿಸೆಂಬರ್​ನಲ್ಲಿ ರಜಾ ದಿನ ಇನ್ನೂ ಉಳಿದಿವೆ. ಆರ್​ಬಿಐ (RBI) ಕ್ಯಾಲೆಂಡರ್ ಪ್ರಕಾರ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಒಟ್ಟು 18 ದಿನಗಳವರೆಗೆ ರಜೆ (Bank holidays) ಇದೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಈ ಡಿಸೆಂಬರ್​ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸಾರ್ವತ್ರಿಕ ರಜೆ ಇದೆ. ಉಳಿದಂತೆ ಬೇರೆ ಬೇರೆ ದಿನಗಳು ಪ್ರಾದೇಶಿಕ ರಜೆಗಳಿವೆ. ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಕಡೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 20ರಿಂದಲೇ ರಜೆಗಳು ಶುರುವಾಗುತ್ತವೆ. ಮೇಘಾಲಯ ರಾಜ್ಯದಲ್ಲಂತೂ ಡಿಸೆಂಬರ್ 18ರಿಂದ 30ರವರೆಗೆ ಮೂರು ದಿನ ಹೊರತುಪಡಿಸಿ ಉಳಿದ ದಿನಗಳು ರಜೆ ಇದೆ. ಮಿಝೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ರಾಜ್ಯಗಳಲ್ಲೂ ಬ್ಯಾಂಕ್ ರಜಾದಿನಗಳು ಡಿಸೆಂಬರ್​ನಲ್ಲಿ ಬಹಳ ಇವೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರದ ರೆಗ್ಯುಲರ್ ರಜೆಗಳ ಹೊರತಾಗಿ ಇರುವುದು ಡಿ. 25ರ ಕ್ರಿಸ್ಮಸ್​ನಂದು ಮಾತ್ರವೇ.

ಕರ್ನಾಟಕದಲ್ಲಿ ಡಿಸೆಂಬರ್​ನಲ್ಲಿ ಬ್ಯಾಂಕ್ ರಜಾದಿನಗಳು

ಡಿ. 7: ಭಾನುವಾರದ ರಜೆ

ಡಿ. 13: ಎರಡನೇ ಶನಿವಾರದ ರಜೆ

ಡಿ. 14: ಭಾನುವಾರ ರಜೆ

ಡಿ. 21: ಭಾನುವಾರದ ರಜೆ

ಡಿ. 25, ಗುರುವಾರ: ಕ್ರಿಸ್ಮಸ್ ಹಬ್ಬ (ಎಲ್ಲೆಡೆ ರಜೆ)

ಡಿ. 27: ನಾಲ್ಕನೇ ಶನಿವಾರದ ರಜೆ

ಡಿ. 28: ಭಾನುವಾರದ ರಜೆ

ರಜಾದಿನಗಳಲ್ಲಿ ಬ್ಯಾಂಕ್ ಕಚೇರಿಗಳು ಬಾಗಿಲು ಬಂದ್ ಆಗಿದ್ದರೂ ಆನ್​ಲೈನ್ ಬ್ಯಾಂಕಿಂಗ್ ಸದಾ ತೆರೆದಿರುತ್ತದೆ. ಜನರು ನೆಟ್​ಬ್ಯಾಂಕಿಂಗ್ ಉಪಯೋಗಿಸಿ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಮಾಡಬಹುದು.

Comments are closed.