AI: ವಿದ್ಯಾರ್ಥಿಯ ಕೈ ಬರಹದಂತೆಯೇ ಹೋಂವರ್ಕ್ ಮಾಡಿದ AI !!

AI: ಇಂದು ಇಡೀ ಜಗತ್ತನ್ನೇ ಎ ಐ ತಂತ್ರಜ್ಞಾನ ವ್ಯಾಪಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅದು ಇತರರ ಅಸ್ತಿತ್ವವನ್ನು ಕಸಿದುಕೊಳ್ಳುತ್ತಿದೆ. ಮುಂದೊಂದು ದಿನ ಈ ತಂತ್ರಜ್ಞಾನ ಇಡೀ ಜಗತ್ತನ್ನೇ ಆಳಬಹುದು. ಇದೀಗ ಅಚ್ಚರಿ ಎಂಬಂತೆ ಎ ಐ ವಿದ್ಯಾರ್ಥಿಯ ಕೈಬರಹದ ರೀತಿಯೇ ಹೋಮರ್ಕ್ ಮಾಡಿ ಅಚ್ಚರಿ ಮೂಡಿಸಿದೆ.

ಹೌದು, ಈ ವಿದ್ಯಾರ್ಥಿಯ ಕೈ ಬರಹದ ರೀತಿಯೇ ಹೋಂವರ್ಕ್ ಮಾಡಿದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಗೂಗಲ್ನ ಹೊಸ ನ್ಯಾನೋ ಬನಾನಾ ಪ್ರೊ(Google’s Nano Banana Pro) ಬಳಿ ಒಬ್ಬಾತ ಗಣಿತ ಪ್ರಶ್ನೆಯ ಫೋಟೋವನ್ನು ಕಳಿಸಿ ಅದನ್ನು ಪರಿಹರಿಸುವಂತೆ ಹೇಳಿದ್ದಾರೆ. ಆದರೆ ಎಐ ಅವರದೇ ಕೈ ಬರಹದ ರೀತಿಯಲ್ಲಿ (handwriting) ಗಣಿತ ಪ್ರಶ್ನೆಗೆ ಉತ್ತರ ನೀಡಿದೆ.
ಅವರು ಪ್ರಯತ್ನಿಸಿದ ಪರೀಕ್ಷೆಯನ್ನು ವಿವರಿಸುತ್ತಾ, “ನಾನು ಗೂಗಲ್ ಬಳಿ ಒಂದು ಗಣೀತ ಪ್ರಶ್ನೆಯ ಚಿತ್ರವನ್ನು ನೀಡಿದೆ, ಮತ್ತು ಅದು ನನ್ನ ನಿಜವಾದ ಕೈಬರಹದಲ್ಲಿ ಅದನ್ನು ಸರಿಯಾಗಿ ಪರಿಹರಿಸಿದೆ. ವಿದ್ಯಾರ್ಥಿಗಳು ಇದನ್ನು ಇಷ್ಟಪಡುತ್ತಾರೆ” ಎಂದು ಅವರು ಬರೆದುಕೊಂಡಿದ್ದಾರೆ.
Comments are closed.