Sullia: ಸುಳ್ಯ: ಜಾಗದ ತಕರಾರು: ಮಾರಕ ಅಸ್ತ್ರದಿಂದ ಹಲ್ಲೆ

Sullia: ಜಾಗದ ವಿವಾದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸುಳ್ಯದ ಕೊಲ್ಲಮೊಗ್ರದ ಶಿವಾಲದಲ್ಲಿ ನಡೆದಿದೆ.

ಕೊಲ್ಲಮೊಗ್ರ ಗ್ರಾಮದ ಶಿವಾಲ ವಿಶ್ವನಾಥ ರೈ ಹಲ್ಲೆಗೊಳಗಾದವರು. ಭರತ್ ಶಿವಾಲ ಹಲ್ಲೆ ನಡೆಸಿದ ಆರೋಪಿ.ವಿಶ್ವನಾಥ ರೈ ಮತ್ತು ಭರತ್ ಶಿವಾಲ ನಡುವೆ ಹಲವು ಸಮಯಗಳಿಂದ ಜಾಗದ ತಕರಾರು ಇತ್ತು. ಈ ನಡುವೆ ಭರತ್ ಶಿವಾಲ ರಸ್ತೆಯನ್ನು ಅಗಲೀಕರಣಗೊಳಿಸಿದ್ದರು. ಇದೇ ಸಂದರ್ಭ ವಿಶ್ವನಾಥ ರೈ ತನ್ನ ಜಾಗಕ್ಕೆ ಬೇಲಿ ಹಾಕುತ್ತಿದ್ದಾಗ ಮತ್ತೆ ವಿವಾದ ಉಂಟಾಗಿದೆ. ಬೇಲಿ ತೆಗೆಯುವ ವಿಚಾರದಲ್ಲಿ ಜಗಳವಾಗಿ ವಿಶ್ವನಾಥ ರೈ ಅವರಿಗೆ ಭರತ್ ಶಿವಾಲ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವಿಶ್ವನಾಥ ರೈಯವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.