‘ಗಾಳ ಹಾಕಿ ಮೀನು ಹಿಡಿಯುವ ತಾಳ್ಮೆಯಿದೆ’ ಸಿಎಂ ಎದುರೇ ಡಿಕೆಶಿ ಮಾರ್ಮಿಕ ಮಾತು

ಬೆಂಗಳೂರು: ‘ವಿಶ್ವ ಮೀನುಗಾರಿಕಾ ದಿನಾಚರಣೆ-2025’ರ ಮತ್ರ್ಯ ಮೇಳದಲ್ಲಿ ಮೀನು ಹಿಡಿಯುವ ಬಗ್ಗೆ ಮೀನು ಸಹಿತ ಡಿಸಿಎಂ ಡಿ. ಕೆ.ಶಿವಕುಮಾರ್ ರವರು ಸಿದ್ದರಾಮಯ್ಯರಿಗೆ ವಿವರಿಸಿದ್ದು ಈ ಸಂದರ್ಭ ಡಿಕೆಶಿ ಹೇಳಿದ ಒಂದು ಮಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಈ ಮಾತು ಪ್ರಸ್ತುತ ರಾಜಕೀಯದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದಂತಿತ್ತು. ನನಗೆ ಗಾಳ ಹಾಕಿ ಮೀನು ಹಿಡಿಯುವ ತಾಳ್ಮೆ ಇದೆ ಅನ್ನುವ ಅವರ ಈ ಮಾತೇ ಈ ಚರ್ಚೆಯಲ್ಲಿರೋದು.

“ಮೀನು ಎಂದರೆ ಲಕ್ಷ್ಮಿ. ರೈತರು ಭೂಮಿಯಲ್ಲಿ ಕೃಷಿ ಮಾಡಿದರೆ, ಮೀನುಗಾರರು ನೀರಿ ನಲ್ಲಿ ಕೃಷಿ ಮಾಡುತ್ತಾರೆ. ಪ್ರಾಣವನ್ನೂ ವಣಕ್ಕಿಟ್ಟು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಾರೆ. ಮೀನುಗಾರರಿಗೆ ಸೂರ್ಯ, ಚಂದ್ರ ಎರಡೇ ಕಾಣುವುದು. ಉಳಿದಂತೆ ತಮ್ಮ ಆತ್ಮಬಲದಿಂದ ಇದನ್ನು ಮಾಡಿಕೊಂಡು ಬರುತ್ತಿದ್ದಾರೆ” ಎಂದು ಡಿ.ಕೆ.ಶಿ ನುಡಿದರು.
”ಮೀನು ಹಿಡಿಯುವುದು ಬೇರೆ, ಮಾರಾಟ ಮಾಡುವುದು ಬೇರೆ. ನಾನು ಮುಖ್ಯಮಂತ್ರಿಗಳಿಗೆ ಮಶೀರ್ ಫಿಶ್ ತೋರಿಸಿದೆ. ನಾನು ಸಣ್ಣವನಿದ್ದಾಗ ಸಂಗಮಕ್ಕೆ ಹೋಗಿ ಮೀನು ಹಿಡಿಯುತ್ತಿದ್ದೆ. ಇದಕ್ಕೆ ತಾಳ್ಮೆ ಬೇಕು. ಈ ಮೀನು ವ್ಯವಹಾರ ಜಾತಿ ಮೇಲೆ ಇಲ್ಲ, ನೀತಿ, ಛಲ ಹಾಗೂ ಆಸಕ್ತಿ ಮೇಲಿದೆ. ಮೀನುಗಾರನಿಗೆ ನಿತ್ಯ ಮೀನು ಸಿಗುವುದಿಲ್ಲ. ಕೆಲವೊಮ್ಮೆ ವಾರವಾದರೂ ಒಂದೂ ಮೀನು ಸಿಗುವುದಿಲ್ಲ. ಅಂತಹ ತಾಳ್ಮೆ ವೃತ್ತಿ ನಡೆಸುತ್ತಿರುವ ಮೀನುಗಾರರು ಶ್ರಮ ಜೀವಿಗಳು’ ಎಂದು ಅವರು ಪ್ರಶಂಸಿಸಿದರು.
ಕಳೆದ ಎರಡು ದಿನಗಳಿಂದ ಗರಿಗೆದರಿದೆ. ಇದರ ನಡುವೆ, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಈ ಸಂದರ್ಭ ಡಿ. ಕೆ.ಶಿವಕುಮಾರ್ ತಮ್ಮ ಭಾಷಣದ ವೇಳೆ, ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ ಎಂಬ ಮಾರ್ಮಿಕ ನುಡಿಗಳನ್ನಾಡಿದರು. ಇನ್ನು ನಾನು ಬೇಗ ಸಭೆಯಿಂದ ನಿರ್ಗಮಿಸುತ್ತಿದ್ದೇನೆ. ಇದನ್ನು ಅನ್ಯತಾ ಭಾವಿಸಬಾರದು,” ಎಂದು ಹೇಳಿ ಮುಂಚಿತವಾಗಿಯೇ ಕಾರ್ಯಕ್ರಮದಿಂದ ಹೊರನಡೆದರು.
ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಮತ್ತ್ವ ಸಮ್ಮೇಳನ ಉದ್ಘಾಟನೆ ವೇಳೆ ಮೀನು ಮರಿಗಳನ್ನು ಗ್ಲಾಸ್ ಬಾಟಲಿಗೆ ಹಾಕಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಮಂಕಾಳ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Comments are closed.