ಪ್ರವಾಸಿಗ ಹಚ್ಚಿದ ಮೇಣದ ಬತ್ತಿ: ಚೀನಾದ ಪ್ರಸಿದ್ಧ ಪರ್ವತ ತುದಿಯ ದೇವಾಲಯ ಕರಕಲು!

ಬೀಜಿಂಗ್: ಪ್ರವಾಸಿಗ ಒಬ್ಬ ಮೇಣದ ಬತ್ತಿಗಳು ಮತ್ತು ಧೂಪ ದ್ರವ್ಯವನ್ನು ಅಜಾಗರೂಕತೆಯಿಂದ ಹಚ್ಚಿದ ಪರಿಣಾಮ ಬೆಂಕಿ ಕಾಣಿಸಿಕೊಂಡು ದೇವಾಲಯ ಸುಟ್ಟು ಕರಕಲಾಗಿದೆ. ದಿ ನ್ಯೂಯಾರ್ಕ್ ಪೋಸ್ಟ್ನ ವರದಿಯ ಪ್ರಕಾರ, ಈ ಘಟನೆ ನವೆಂಬರ್ 12 ರ ಬುಧವಾರದಂದು ನಡೆದಿದೆ. ಜಿಯಾಂಗ್ಸು ಪ್ರಾಂತ್ಯದ ವೆನ್ಚಾಂಗ್ ಮಂಟಪದಲ್ಲಿ ಸಂಭವಿಸಿದೆ.

ದೇವಾಲಯ ಸಂಕೀರ್ಣ ಫೆಂಗ್ವಾಂಗ್ ಪರ್ವತದ ಇಳಿಜಾರುಗಳನ್ನು ಅನ್ವೇಷಿಸುವ ಸಂದರ್ಶಕರಿಗೆ ಜನಪ್ರಿಯ ಸಾಂಸ್ಕೃತಿಕ ತಾಣವಾಗಿದೆ. ವೆನ್ಚಾಂಗ್ ಮಂಟಪದಲ್ಲಿ ಬೆಂಕಿ ಸ್ಫೋಟ ಕಾರಣ ಮೂರು ಅಂತಸ್ತಿನ ಮಂಟಪ, ಅದರ ಛಾವಣಿಯ ಭಾಗಗಳು ಕುಸಿದು ಬೆಂಕಿಗೆ ವೇಗವಾಗಿ ಆಹುತಿಯಾಗುತ್ತಿರುವುದನ್ನು ತೋರಿಸಿದೆ.
2009ರಲ್ಲಿ ಪೂರ್ಣಗೊಂಡ ಈ ದೇವಾಲಯವನ್ನು ನೆರೆಯ ಯೋಂಗ್ಕಿಂಗ್ ದೇವಾಲಯವು ನಿರ್ವಹಿಸುತ್ತಿದೆ. ಇದರ ಮೂಲವು ಶತಮಾನಗಳಷ್ಟು ಹಿಂದಿನದು. ಮಂಟಪವು ಆಧುನಿಕ ಪುನರ್ನಿರ್ಮಾಣವಾಗಿದ್ದರೂ, ಅದರ ವಿನ್ಯಾಸವು ಅಲ್ಲಿನ ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಗಳನ್ನು ಪ್ರತಿಬಿಂಬಿಸುತ್ತದೆ.
ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಅಲ್ಲದೆ ಬೆಂಕಿಯು ಈ ಮಂಟಪವನ್ನು ಮೀರಿ ಹರಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.