ಶಬರಿಮಲೆ ಯಾತ್ರಿಕರಿಗೆ ರಸ್ತೆ ನೆರವು ಸಹಾಯವಾಣಿ ಆರಂಭ: ಫೋನ್ ನಂಬರ್ ಗಮನಿಸಿ

ಪಟ್ಟಣಂತಿಟ್ಟ: ಶಬರಿಮಲೆ ಯಾತ್ರೆ ಜೋರಾಗಿ ಶುರುವಾಗಿದೆ. ಶಬರಿಗಿರಿ ಯಾತ್ರೆಗೆ ಆಗಮಿಸುವ ಯಾತ್ರಿಕರ ವಾಹನಗಳಿಗೆ ನೆರವು ನೀಡಲು ಸಹಾಯವಾಣಿ ಶುರು ಮಾಡಲಾಗಿದೆ. ರಸ್ತೆ ಬದಿಯಲ್ಲಿ ಈ ನೆರವು ನೀಡುವ ವ್ಯವಸ್ಥೆಗೆ ಶುಕ್ರವಾರ ಕೇರಳದ ಮೋಟಾರು ವಾಹನ ಇಲಾಖೆ ಚಾಲನೆ ನೀಡಿದೆ.

ಪಟ್ಟಣಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಹಾದಿಯಲ್ಲಿ ಶಬರಿಮಲೆಗೆ ಆಗಮಿಸುವ ವೇಳೆ ಆಗಬಹುದಾದ ಅಪಘಾತ, ವಾಹನ ಕೆಟ್ಟು ಹೋದರೆ, ಅಥವಾ ದಾರಿಮಧ್ಯೆ ಏನಾದರೂ ತೊಂದರೆ ಆದರೆ ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಶಬರಿಮಲೆ ಸುರಕ್ಷಿತ ವಲಯ ಸಹಾಯವಾಣಿ ಸಂಖ್ಯೆಗಳು ಹೀಗಿವೆ.
9400044991, 9562318181; : 9496367974, 8547639173 : 9446037100, 8547639176. ಈ ಕಂಟ್ರೋಲ್ ರೂಂ ನಂಬರ್ ಗಳಿಗೆ ಯಾತ್ರಿಕರು ಸಂಪರ್ಕಿಸಬಹುದು. ಈ ವಿಶೇಷ ಸೇವೆಯು ಶಬರಿಮಲೆ ಯಾತ್ರೆ ಮುಗಿಯುವ ತನಕ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಇಲಾಖೆ ಹೇಳಿದೆ.
Comments are closed.