Karnataka Gvt : ಸರ್ಕಾರಿ ಪುರುಷ ನೌಕರರಿಗೆ ಗುಡ್ ನ್ಯೂಸ್ – ‘ಶಿಶುಪಾಲನ ರಜಾ’ ಮಂಜೂರು ಮಾಡಿದ ಸರ್ಕಾರ ಆದೇಶ!!

Karnataka Gvt : ಇತ್ತೀಚಿಗಷ್ಟೇ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ನೀಡಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಸರ್ಕಾರವು ಪುರುಷ ನೌಕರರಿಗೆ ‘ಶಿಶುಪಾಲನಾ’ ರಜೆಯನ್ನು ಮಂಜೂರು ಮಾಡಿದೆ.

ಹೌದು, ಒಂಟಿ ಪೋಷಕರಾಗಿರುವ ರಾಜ್ಯ ಸರ್ಕಾರಿ ಪುರುಷ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಮೇಲೆ ಓದಲಾದ ಸರ್ಕಾರಿ ಆದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಅವರ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಮೂಲತಃ ಶಿಶುಪಾಲನಾ ರಜೆಯ ಸೌಲಭ್ಯವನ್ನು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ವಿಸ್ತರಿಸಿದ್ದಾಗ್ಯೂ ಏಕಪೋಷಕರಾಗಿರುವ ಪುರುಷ ಸರ್ಕಾರಿ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸುವುದು ನ್ಯಾಯಸಮ್ಮತವಾಗುವುದನ್ನು ಪರಿಗಣಿಸಿ ಸರ್ಕಾರ ಶಿಶುಪಾಲನಾ ರಜೆಯ ಸೌಲಭ್ಯವನ್ನು ಕೆಲವು ಷರತ್ತುಗಳಿಗೊಳಪಟ್ಟು ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ವಿವಾಹ-ವಿಚ್ಚೇದಿತ/ವಿಧುರ ಸರ್ಕಾರಿ ಪುರುಷ ನೌಕರರಿಗೂ ಸಹ ವಿಸ್ತರಿಸಲು ತೀರ್ಮಾನಿಸಿದೆ.
Comments are closed.